Friday, March 14, 2025

Latest Posts

ಕೃಷಿ ಕಡೆ ಮುಖ ಮಾಡಿದ ನಟಿ ಶ್ರುತಿ.!

- Advertisement -

‘ಶ್ರುತಿ’ ಚಿತ್ರದಲ್ಲಿ ನಟಿಸುವ ಮೂಲಕ ಶ್ರುತಿ ರವರು ದೊಡ್ಡ ಖ್ಯಾತಿ ಪಡೆದರು. ನಂತರ ‘ಗೌರಿ ಗಣೇಶ’, ‘ಅಳಿಮಯ್ಯ’, ‘ಮುದ್ದಿನ ಮಾವ’, ‘ಕರ್ಪೂರದ ಗೊಂಬೆ’, ‘ವೀರಪ್ಪ ನಾಯ್ಕ’, ‘ಸೂರಪ್ಪ’ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ಶ್ರುತಿ ನಟಿಸಿ ಎಲ್ಲರ ಮನೆ ಮಾತಾಗಿದ್ದರು. ಅವರ ಅದ್ಭುತ ನಟನೆಗಾಗಿ ರಾಜ್ಯ ಪ್ರಶಸ್ತಿಗಳು, ಫಿಲ್ಮ್ ಫೇರ್ ಪ್ರಶಸ್ತಿಗಳು ಸಿಕ್ಕಿವೆ. ಅದಷ್ಟೇ ಅಲ್ಲದೆ ‘ಬಿಗ್ ಬಾಸ್ ಕನ್ನಡ 3’ ಶೋ ಟ್ರೋಫಿಯನ್ನು ಕೂಡ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ನಟಿ ಶ್ರುತಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ಇವರು ಇದೀಗ ಕೃಷಿ ಕಡೆ ಗಮನವಹಿಸಿದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಅನೇಕ ಕಲಾವಿದರು ರಾಜಕೀಯ ಮತ್ತು ಕೃಷಿ ಕಡೆ ಮುಖ ಮಾಡುತ್ತಿದ್ದಾರೆ. ಅಂತೆಯೇ ಕನ್ನಡದ ನಟಿ ಶ್ರುತಿ ಅವರು ಕೂಡ ಕೃಷಿ ಕಡೆಗೆ ಮುಖ ಮಾಡಿದ್ದಾರೆ. ಶ್ರುತಿ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಅದಷ್ಟೇ ಅಲ್ಲದೆ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಜಡ್ಜ್ ಆಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

“ನಾನೇ ಉತ್ತಿ-ಬಿತ್ತಿ ಬೆಳೆಯಬೇಕೆಂಬುದು ನನ್ನ ಬಹುವರ್ಷದ ಆಸೆ. ಭಗವಂತನಿಗೆ ಕೋಟಿ ನಮನಗಳು” ಎಂದು ಶ್ರುತಿ, ಅವರ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಈ ಕೆಲಸಕ್ಕೆ ಶ್ರುತಿ ಅವರ ತಾಯಂದಿರು ಕೂಡ ಸಾಥ್ ನೀಡಿದ್ದಾರೆ. ಶ್ರುತಿ ಅವರ ಈ ವಿಡಿಯೋವನ್ನು ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಷ್ಟು ಕೆಲಸದೊತ್ತಡದ ನಡುವೆಯೂ ಸಹ ಕೃಷಿ ಕಡೆ ಗಮನವಹಿಸಿರುವುದು ನಿಜಕ್ಕೂ ಹೆಮ್ಮೆಯೇ ಸಂಗತಿ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

 

- Advertisement -

Latest Posts

Don't Miss