ಕಾಮನ್ವೆಲ್ತ್ ಗೇಮ್ಸ್ 2022: ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಲಕ್ಷ್ಯ ಸೇನ್ ಚಿನ್ನದ ಪದಕ

ಬರ್ಮಿಂಗ್ಹ್ಯಾಮ್: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2022 ರ ಪುರುಷರ ಸಿಂಗಲ್ಸ್ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಲಕ್ಷ್ಯ ಸೇನ್ ಸೋಮವಾರ ಮಲೇಷ್ಯಾದ ಪ್ರಬಲ ತ್ಸೆ ಯಾಂಗ್ ಎನ್ಜಿ ಅವರನ್ನು 19-21, 21-9, 21-16 ರಿಂದ ಸೋಲಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಇದು ಸಿಡಬ್ಲ್ಯೂಜಿ 2022ರಲ್ಲಿ ಭಾರತದ 20ನೇ ಚಿನ್ನದ ಪದಕವಾಗಿದೆ.

ಭಾರತದ ಪಿ.ವಿ ಸಿಂಧು ಅವರು ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಚಿನ್ನ ಗೆದ್ದ ಬೆನ್ನಲ್ಲೇ, ಭಾರತದ ಲಕ್ಷ್ಯ ಸೇನ್ ಅವರು, ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಮಲೇಷ್ಯಾ ಕ್ರೀಡಾಪಟುವನ್ನು ಸೋಲಿಸುವ ಮೂಲಕ, ಸ್ವರ್ಣ ಪದಕ ಗೆದ್ದಿದ್ದಾರೆ.

About The Author