Sunday, September 8, 2024

Latest Posts

ಚೀನಾ ಮೂಲದ ಕಾರ್ಖಾನೆಯಿಂದ ರೋಗಭೀತಿ…!

- Advertisement -

www.karnatakatv.net :ಗುಂಡ್ಲುಪೇಟೆ: ಸಾಂಕ್ರಾಮಿಕ ರೋಗ ಹರಡೋ ಭೀತಿಯಿಂದಾಗಿ ಚೆಂಡು ಹೂವಿನ ಸಂಸ್ಕರಣಾ ಘಟಕವನ್ನು ಬಂದ್ ಮಾಡುವಂತೆ ರೈತರು ಪ್ರತಿಭಟನೆ ನಡೆಸಿದ್ರು.

ಗುಂಡ್ಲುಪೇಟೆ ತಾಲೂಕಿನ ಕಗ್ಗಳ ಹುಂಡಿ ಗ್ರಾಮದಲ್ಲಿ ಚೀನಾ ಮೂಲದ ಚೆಂಡು ಹೂ ಸಂಸ್ಕರಣಾ ಘಟಕ ಸ್ಥಾಪನೆಯಾಗಿದೆ. ಆದ್ರೆ ಈ ಘಟಕ ಹೊರ ಬಿಡೋ ರಾಸಾಯನಿಕ ತ್ಯಾಜ್ಯದಿಂದಾಗಿ ಗ್ರಾಮಸ್ಥರು ಆಕ್ರೋಶ ಗೊಂಡಿದ್ದಾರೆ. ಈ ತ್ಯಾಜ್ಯದ ದುರ್ವಾಸನೆಯಿಂದಾಗಿ ಗ್ರಾಮಸ್ಥರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಅಲ್ಲದೆ ಇದರಿಂದ ಹಲವು ರೋಗಗಳು ಹರಡೋ ಭೀತಿ ಕೂಡ ಎದುರಾಗಿದೆ ಅಂತ ರೈತ ಸಂಘಟನೆ ಪ್ರತಿಭಟನೆ ನಡೆಸಿತು. ಪ್ರವಾಸಿ ಮಂದಿರದಿ ಹೊರಟ ಪ್ರತಿಭಟನಾನಿರತ ರೈತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ರು. ಅಲ್ಲದೆ ಕೊಡಹಳ್ಳಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು ಸಂಸ್ಕರಣಾ ಘಟಕವನ್ನು ಬಂದ್ ಮಾಡುವಂತೆ ಆಗ್ರಹಿಸಿದ್ರು.

ಈ ವೇಳೆ ಮಾತನಾಡಿದ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನಾರು ಪ್ರಕಾಶ್, ಕಾರ್ಖಾನೆಯವರ ಹಣದ ಆಸೆಗೆ ಬಲಿಯಾಗಬೇಡಿ. ನಮ್ಮ ತೆರಿಗೆ ಹಣದಿಂದ ನಿಮಗೆ ಸರ್ಕಾರ ಸಂಬಳ ನೀಡುತ್ತಿದೆ.  ತ್ಯಾಜ್ಯ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳದಿರೋ ಈ ಘಟಕವನ್ನ ಕೂಡಲೇ ನಿಲ್ಲಿಸುವಂತೆ ಆದೇಶ ಹೊರಡಿಸಬೇಕು ಅಂತ ತಹಸಿಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರವಿಶಂಕರ್, ‘ಸಮಸ್ಯೆ ಬಗ್ಗೆ ಈಗಾಗಲೇ ಒಂದು ತಂಡ ಜಿಲ್ಲಾಧಿಕಾರಿಗೆ  ವರದಿ ಸಲ್ಲಿಸಿದ್ದು ಅವರ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತೆ’ ಅಂತ ಸ್ಪಷ್ಟಪಡಿಸಿದ್ರು.

ಕರ್ನಾಟಕ ಟಿವಿ –ಗುಂಡ್ಲುಪೇಟೆ

- Advertisement -

Latest Posts

Don't Miss