Thursday, April 17, 2025

Latest Posts

“ನನ್ನ ಕಂಡರೆ ಮೋದಿಗೆ ಭಯವಿದೆ..!”:ಸಿದ್ದರಾಮಯ್ಯ

- Advertisement -

Political News:

ನನಗೆ ಮೋದಿ ಕಂಡರೆ ಭಯವಿಲ್ಲ. ಆದರೆ ನನ್ನ ಕಂಡರೆ ಅವರಿಗೆ ಭಯವಿದೆ ಏಕೆಂದರೆ ನಾನು RSS ಬಗ್ಗೆ ಟೀಕೆ ಮಾಡುತ್ತೇನೆ. ಸತ್ಯ ಹೇಳುತ್ತೇನೆ ಎನ್ನುವ ಭಯ ಅವರಿಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಂದಾಯ ಗ್ರಾಮ, ಅರಣ್ಯ ಇಲಾಖೆಯ ಕಾನೂನು ತಿದ್ದುಪಡಿ ಮಾಡಿದ್ದು ನಾವು. ತಾಂಡಾ, ಹಟ್ಟಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ನಾವು. ಈಗ ಚುನಾವಣೆ ಇರುವ ಹಿನ್ನೆಲೆ ಬಿಜೆಪಿಯವರು ಪ್ರಧಾನಿ ಮೋದಿಯವರನ್ನು ಕರೆಯಿಸಿ ನಾವೇ ಮಾಡಿದವರೆಂದು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಇನ್ನು ನಮ್ಮ ಕಾಂಗ್ರೆಸ್ ಸರಕಾರದಲ್ಲಿ ೩೦ ಸಾವಿರ ಕೋಟಿ ರೂ. SC ST ಹಣವಿತ್ತು. ಈಗ ಅದು ೪೨ ಸಾವಿರ ಕೋಟಿ ರೂ. ಆಗಬೇಕಿತ್ತು. ಆದರೆ ೨೮ ಸಾವಿರ ಕೋಟಿಯಾಗಿದೆ. ಇದರ ವಿರುದ್ಧ ಬಿಜೆಪಿ SC ST ಹಣವನ್ನು ಬೇರೆ ಕಡೆ ತಿರುಗಿಸಿದ್ದಾರೆ. ಬಿಜೆಪಿ ಎಂದರೆ ಸುಳ್ಳನ್ನು ಉತ್ಪಾದಿಸುವ ಫ್ಯಾಕ್ಟರಿ. ನೂರು ಬಾರಿ ಸುಳ್ಳು ಹೇಳಿ ಅದನ್ನೇ ಸತ್ಯ ಎಂದು ಬಿಂಬಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ ಸಿದ್ದರಾಮಯ್ಯ.

ಮಂಡ್ಯ: ಜ.25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ

ಹಾಸನ: ಜಿಲ್ಲಾ ಕಾರಾಗೃಹದಲ್ಲಿ ಗಾಂಜಾ ಪ್ಯಾಕೇಟ್..ಮೊಬೈಲ್..ಹೆಡ್ ಫೋನ್..!?

ಉತ್ತರ ಕರ್ನಾಟಕ ಜನರ ಅಭಿವೃದ್ಧಿಗೆ ಬದ್ಧ- ಪ್ರಧಾನಿ ಮೋದಿ

- Advertisement -

Latest Posts

Don't Miss