ಸಿಎಂ ಸಿದ್ದರಾಮಯ್ಯ ಜಾತಿಗಣತಿ ವಿಚಾರದಲ್ಲಿ ಪೋಪ್ ಆಗಲು ಹೊರಟಿದ್ದಾರೆ. ಮೊದಲು ಮುಲ್ಲಾ ಆಗಿದ್ದರು, ಈಗ ಫಾದರ್ ಆಗಲು ಹೊರಟಿದ್ದಾರೆ. ಕರ್ನಾಟಕದ ಪೋಪ್ ಆಗಲು ಸಿದ್ಧರಾಗಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಟೀಕಿಸಿದ್ದಾರೆ. ಸಿಎಂ ಕಚೇರಿ ಕ್ರಿಶ್ಚಿಯನ್ ಮಿಷನರಿಗಳ ನೆರಳಲ್ಲಿ ಕೆಲಸ ಮಾಡುತ್ತಿದೆ. 47 ಉಪಜಾತಿ ಪಟ್ಟಿ ಕೈಬಿಡದೆ ಬಂದರೆ ಆಯೋಗಕ್ಕೆ ಜನ ಮುತ್ತಿಗೆ ಹಾಕಲು ದಿನ ಬರುತ್ತದೆ.
ಸಿಎಂ ಕ್ರಿಶ್ಚಿಯನ್ ಗರ್ಭಗುಡಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆಡಳಿತವು ಈಗ ಟಿಪ್ಪು ಪೋಷಾಕು–ಪಾದ್ರಿ ರೂಪದಲ್ಲಿದೆ. ಸರ್ಕಾರ ಮುಲ್ಲಾ–ಪಾದ್ರಿಗಳ ಕೈಗೊಂಬೆ ಆಗಲು ಹೊರಟಿದೆ. ಫಾದರ್ ಸಿದ್ದರಾಮಯ್ಯ ಹಿಂದೆ ಯಾರದೋ ಓಲೈಕೆ ಅಡಗಿದ್ದು, ರಾಜ್ಯದ ಹಿತ ಮತ್ತು ಸಾಮಾಜಿಕ ನ್ಯಾಯದ ಆಶಯವನ್ನು ಶಿಲುಬೆಗೆ ಏರಿಸುತ್ತಿದ್ದಾರೆ. ದಲಿತ–ಒಬಿಸಿ ಮತಾಂತರಕ್ಕೆ ಕೈಹಾಕಿದದ್ದು ದುರಂತ. ಸಿಎಂ ಫಾದರ್ ಸಿದ್ದರಾಮಯ್ಯ ಸಂವಿಧಾನವನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸರ್ಕಾರ ಕ್ರಿಶ್ಚಿಯನ್ 75 ಉಪಜಾತಿ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಬೇಕು. ನಾಳೆಯಿಂದ ಸಾರ್ವಜನಿಕ ವಿರೋಧದ ನಡುವೆ ಆಯೋಗಕ್ಕೆ ಜನ ಮುತ್ತಿಗೆ ಹಾಕಲು ಮೊದಲು ಕ್ರಮ ಕೈಗೊಳ್ಳಬೇಕು. ಈ ಗೊಂದಲದ ನಡುವೆ ಒಳ್ಳೆಯ ವರದಿ ಸಾದ್ಯವಿಲ್ಲ. ಕ್ರಿಶ್ಚಿಯನ್ ಹೆಸರು ತೆಗೆಯುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಐದು ಒಳಪಂಗಡಗಳಿವೆ. ಜನರ ಹೋರಾಟ ಅನಿವಾರ್ಯ. ಸಚಿವ ಸಂಪುಟದಲ್ಲಿ ಸಿಎಂ ಏಕಾಂಗಿಯವರು, ಆದರೆ ಒಳಪಂಗಡ ಗೊಂದಲ ಮಾಡುತ್ತಿದೆ. ಜಾರಕಿಹೊಳಿ, ಡಿಕೆ, ಪರಮೇಶ್ವರ್, ಸಿದ್ದರಾಮಯ್ಯ ಪಂಗಡಗಳು ಪ್ರಬಲವಾಗಿದೆ. ಕ್ರೈಸ್ತ ಮಿಷನರಿ ನೆರಳು ಸಿಎಂ ಕಚೇರಿಯ ಮೇಲೆ ಬಿದ್ದಿದೆ. ಲಿಂಗಾಯತ ಧರ್ಮ ಪ್ರತ್ಯೇಕ ಚರ್ಚೆ ವಿಚಾರ ಬಿಜೆಪಿ ಗಮನದಲ್ಲಿಟ್ಟುಕೊಂಡಿದೆ. ಧರ್ಮ ಹಿಂದೂ ಎಂದು ಬರೆಸಬೇಕು ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಮಠಾಧೀಶರಿಗೆ, ಲಿಂಗಾಯತ ನಾಯಕರಿಗೆ ಮನವೊಲಿಸ್ತೇವೆ ಎಂದಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




