ಬೆಂಗಳೂರು: ಮೋದಿ ಸರ್ಕಾರ ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಇನ್ನೂ ಕೊಟ್ಟಿಲ್ಲ, ಆದರೆ ನಿರುದ್ಯೋಗಿಗಳಿಗೆ ಕೋಪ ಬರುತ್ತಿಲ್ಲ, ಯಾಕೆ ಅಂತ ಗೊತ್ತಿಲ್ಲವೆಂದು ಕೆ.ಆರ್. ಪುರಂನ ಕೇಂಬ್ರಿಡ್ಜ್ ಮಹಾ ವಿದ್ಯಾಲಯದ ಮೊದಲ ವರ್ಷದ ಇಂಜಿನಿಯರಿಂಗ್ ಪ್ರಾರಂಭೊತ್ಸವ ಹಾಗೂ ನೂತನ ಸರ್ .ಎಂ. ವಿ ಆಡಿಟೋರಿಯಂ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿದರು. ವಿದ್ಯಾಸಂಸ್ಥೆಗಳನ್ನು ಸ್ಥಾಪನೆ ಮಾಡುವುದು ಬಹಳ ಕ್ಷಿಷ್ಟಕರ, ವಿದ್ಯೆ ಕೊಡುವ ಕೆಲಸ ಉತ್ತಮವಾದ ಕೆಲಸ, ಇಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯವಶ್ಯಕ ಎಂದರು. ಸೇವೆಯ ಉದ್ದೇಶದಿಂದ ಶಿಕ್ಷಣಕ್ಷೇತ್ರಕ್ಕೆ, ವಿಜ್ಞಾನ ,ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಬೆಳವಣಿಗೆ ಆಗಿದೆ ಅದಕ್ಕೆ ಅನುಗುಣಮಾಗಿ ವಿದ್ಯಾಸಂಸ್ಥೆಗಳು ಶಿಕ್ಷಣ ನೀಡಬೇಕಿದೆ ಎಂದು ನುಡಿದರು.
ಅನಾರೋಗ್ಯದಿಂದಾಗಿ ನಟ ಕಮಲ್ ಹಾಸನ್ ಚೆನ್ನೈನ ಆಸ್ಪತ್ರೆಗೆ ದಾಖಲು
ಸ್ವಾತಂತ್ರದ ಬಂದಾಗ 16 % ಸಾಕ್ಷರತೆ ಇತ್ತು ಈಗ 78% ಆಗಿದೆ ಇನ್ನೂ 22 % ಅನಕ್ಷರಸ್ಥರಿದ್ದಾರೆ, ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತಾಗಬೇಕು ಎಲ್ಲರಿಗೂ ಶಿಕ್ಷಣ ಸಿಕ್ಕರೆ ಮಾತ್ರ ಸಮಾಜದ ಏಳಿಗೆಯಾಗವುದ. ಉದ್ಯೋಗ ಬಯಸಿದವರಿಗೆ ಉದ್ಯೋಗ ಸಿಗಬೇಕು ಅದಕ್ಕೆ ಅನುಗುಣವಾಗಿ ಶಿಕ್ಷಣ ನೀಡಬೇಕು ಎಂದರು. ಉತ್ತಮ ಶಿಕ್ಷಣದ ಜೊತೆ ಕೌಶಲ್ಯ ತರಬೇತಿ ಬೇಕು, ಕೌಶಲ್ಯ ತರಬೇತಿ ಮೂಲಕ ಉದ್ಯೋಗಗಳು ಸೃಷ್ಟಿ ಆಗುತ್ತವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳಿದರು.
ರಾಜ್ಯದಲ್ಲಿ ಉಗ್ರರ ಸ್ಲೀಪರ್ ಸೆಲ್ ಗಳು ಇದ್ದಾಗ ನಾನು ಗೃಹ ಸಚಿವನಾಗಿದ್ದೆ: ಸಿಎಂ ಬೊಮ್ಮಾಯಿ
ಈ ಹಣ್ಣುಗಳನ್ನು ರಾತ್ರಿ ಹೊತ್ತು ಸೇವಿಸಲೇಬೇಡಿ.. ಇಲ್ಲದಿದ್ದಲ್ಲಿ ಅನಾರೋಗ್ಯ ಬರುವುದು ಖಂಡಿತ..

