ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಕೂಡಲೇ ಸಚಿವ ಈಶ್ವರಪ್ಪನವರನ್ನು ಅರೆಸ್ಟ್ ಮಾಡಿ – ಸಿದ್ಧರಾಮಯ್ಯ ಒತ್ತಾಯ

ಬೆಂಗಳೂರು: ನಿಮ್ಗೆ ಮಾನ ಮರ್ಯಾದೆ ಇದ್ದರೇ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಬಂಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಇಂದು ರಾಜ್ಯಪಾಲರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಅವರು, ಇವತ್ತು ನಾನು ಹಾಗೂ ನಮ್ಮ ಅಧ್ಯಕ್ಷರು, ಮೇಲ್ಮನೆ ವಿಪಕ್ಷ ನಾಯಕ ಹರಿಪ್ರಸಾದ್ ಎಲ್ರೂ ಸೇರಿ ಗವರ್ನರ್ ಭೇಟಿ ಮಾಡಿದ್ದೇವೆ. ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದೇವೆ ಎಂದರು.

ಸಂತೋಷ್ ಪಾಟೀಲ್ ಎಂಬ ಸಿವಿಲ್ ಕಂಟ್ರಾಕ್ಟರ್, ಬಿಜೆಪಿ ಕಾರ್ಯಕರ್ತ ಬೆಳಗಾವಿ ಗ್ರಾಮಾಂತರ ಕ್ಷೇತ್ರಕ್ಕೆ ಸೇರಿದವನು.ಹಳ್ಳಿ ರಸ್ತೆಗಳ ಮಾಡಲು ಸಂತೋಷ್ ಪಾಟೀಲ್ ಎಂಬಾತ ಕೆಲಸ ಪಡೆದು ಮಿನಿಸ್ಟರ್ ಹೇಳಿದ್ರು ಅಂತ ಕೆಲಸ ಮಾಡಿದ್ದಾರೆ. ಆದ್ರೇ.. ವರ್ಕ್ ಆರ್ಡರ್ ಕೊಡ್ತೀವಿ ಅಂತ ಕೊಡಲೇ ಇಲ್ಲ. ಸಾಲ ಮಾಡಿ ಹಣ ತಂದು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿದ್ದ. ಆದರೆ ವರ್ಕ್ ಆರ್ಡರ್ ಕೊಡಲು ಹಾಗೂ ಬಿಲ್ ರಿಲೀಸ್ ಮಾಡಲು 40% ಕಮಿಷನ್ ಡಿಮ್ಯಾಂಡ್ ಮಾಡಿದಾರೆ. ಅವನಿಗೆ ತಿರುಗಿ ತಿರುಗಿ ಸಾಕಾಗಿದೆ ಎಂದರು.

ಏನೇ ಮಾಡಿದರೂ 40% ಕಮಿಷನ್ ಇಲ್ಲದೇ ವರ್ಕ್ ಆರ್ಡರ್ ಕೊಡಲ್ಲ, ಬಿಲ್ ರಿಲೀಸ್ ಮಾಡಲ್ಲ ಅಂದಿದಾರೆ
ಹೀಗಾಗಿ ಸಂತೋಷ್ ಪಾಟೀಲ್ ಪಿಎಂ, ಕೇಂದ್ರ ಸಚಿವರು ಹಾಗೂ ಆರೆಸ್ಸೆಸ್ ನ ಬಿ.ಎಲ್ ಸಂತೋಷ್ ಭೇಟಿಯಾಗಿಯೂ ಮನವಿ ಮಾಡಿದಾರೆ, ದೂರು ಕೊಟ್ಟಿದಾರೆ. ಕಂಟ್ರಾಕ್ಟರ್ ಅಸೋಸಿಯೇಷನ್ ನ ಕೆಂಪಣ್ಣ ಕೂಡ 40% ಗೌರ್ಮೆಂಟ್ ಅಂತ ಆಪಾದನೆ ಮಾಡಿದ್ರು ಎಂದರು.

ಸಂತೋಷ್ ಪಾಟೀಲ್ ಉಡುಪಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡೋದಕ್ಕೆ ಹೋಗಿದ್ದರು. ಕೊನೆಗೆ ಅಲ್ಲೇ ಉಡುಪಿಯಲ್ಲೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಈಶ್ವರಪ್ಪ ನೇರ ಕಾರಣ ಅಂತ ಡೆತ್ ನೋಟಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೊಂದು ನಾನ್ ಬೇಲಬಲ್ ಕೇಸ್ ಆಗಿರೋ ಕಾರಣ, ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.

About The Author