Banglore News: ಆಷಾಢ ಕಳೆಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ತನ್ನ ಮನೆಯನ್ನು ಬದಲಾಯಿಸಲಿದ್ದಾರೆ. ಹಾಗೆಯೇ ಡಿಕೆಶಿ ಕೂಡಾ ತನ್ನ ವಾಸ್ಥವ್ಯ ಬದಲಾಯಿಸುವ ಮಾಹಿತಿ ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಕುಮಾರಕೃಪಾ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಿಂದ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಾವೇರಿ ನಿವಾಸವನ್ನು ಖಾಲಿ ಮಾಡಿ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಸ್ವಂತ ಮನೆ ಧವಳಗಿರಿಗೆ ಶಿಫ್ಟ್ ಆಗಿದ್ದಾರೆ. ಸದ್ಯ ಕಾವೇರಿ ನಿವಾಸದಲ್ಲಿ ರಿನೋವೇಷನ್ ಕಾರ್ಯ ಬಹುತೇಕ ಮುಗಿದಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಇಂದು (ಜುಲೈ 15) ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆಷಾಢ ಮಾಸ ಮುಗಿದ ಬಳಿಕ ಸಿದ್ದರಾಮಯ್ಯ ಅವರು ಕಾವೇರಿ ನಿವಾಸ ಪ್ರವೇಶ ಮಾಡಲಿದ್ದಾರೆ. ಇನ್ನು ಈ ವರೆಗೆ ಸಿದ್ದು ವಾಸವಿದ್ದ ಸರಕಾರಿ ಕುಮಾರ ಕೃಪಾ ಕ್ಕೆ ಡಿಸಿಎಂ ಡಿಕೆಶಿ ಶಿಫ್ಟ್ ಆಗಲಿದ್ದಾರೆ.
Eshwar Khandre : ರಾಜ್ಯದ 5 ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಲಾಗುವುದು- ಈಶ್ವರ್ ಖಂಡ್ರೆ