ಬೆಳಗಾವಿ: ಜೆಡಿಎಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾವರ್ ಅವರು ಜನವರಿ ಮೊದಲ ವಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಕಾಂಗ್ರೆಸ್ ಅನುಸರಿಸಬೇಕಾದ ನಿಯಮಗಳೇನು ಎಂದುಡಿ.ಕೆ.ಶಿವಕುಮಾರ್ ಅವರು ವಿವರಿಸಿದರು. ಮಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ ಅವರು ಪಕ್ಷದ ಶಿಸ್ತು ಉಲ್ಲಂಘಿಸಿದರೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ನೊಟೀಸ್ ಇಶ್ಯೂ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ಮಧ್ಯ ಭಿನ್ನಮತ ಇದೆ ಎಂದು ಎತ್ತಿ ತೋರಿಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
100 ಕೋಟಿ ಮೊತ್ತದ ಹಸಿರು ಆಯವ್ಯಯವನ್ನು ಸರ್ಕಾರ ರೂಪಿಸಿದೆ : ಸಿಎಂ ಬೊಮ್ಮಾಯಿ
ಚುನಾವಣಾ ಸಮಿತಿಯ ಸಭೆಯನ್ನು ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ, ಮೊದಲ ಸಭೆಯಲ್ಲಿ ಸುಮಾರು ಎರಡೂವರೆ ತಾಸು ಚರ್ಚೆ ನಡೆಸಿದ್ದೇವೆ. ಸುಮಾರು 1,350 ಅರ್ಜಿಗಳು ರಾಜ್ಯಾದ್ಯಂತ ಬಂದಿದೆ. ಸಮಿತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲು ಪಕ್ಷದ ಆಧಾರ ಸ್ಥಂಭಗಳಾದ ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಮಟ್ಟದಲ್ಲಿ ಸಭೆ ನಡೆಸಿ, ಡಿಸೆಂಬರ್ 31ರೊಳಗೆ ವರದಿ ನೀಡುವಂತೆ ಸೂಚಿಸಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿವಿದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.29 ರಂದು ಬೆಂಗಳೂರಿನಲ್ಲಿ ಆಟೋ ಚಾಲಕರಿಂದ ಬಂದ್ ಗೆ ಕರೆ