ಸಿದ್ದರಾಮಯ್ಯ ಅವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ಮೊದಲ ಬಾರಿ ಆಗುತ್ತಿಲ್ಲ. ಸಿದ್ದರಾಮಯ್ಯ ಅವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಗ್ಗೆ ಹಲವಾರು ಬಾರಿ ಬದಲಾವಣೆಗಳಾಗಿವೆ. ಅವರ ಕಾಲದಲ್ಲಿಯೂ ಹೀಗೆ ಆಗಿದೆ. ಆಗೇನು ಅವರು ಪಠ್ಯ ಪುಸ್ತಕ ಪರಿಷ್ಕರಣೆ ಹಿಂದೆಗೆದುಕೊಂಡರೆ? ಸುಮ್ಮನೆ ಗೊಂದಲ ಸೃಷ್ಟಿ ಮಾಡಬಾರದು. ನಾವು ಈ ಬಗ್ಗೆ ಮುಕ್ತವಾಗಿದ್ದೇವೆ. ತಪ್ಪುಗಳನ್ನು ಸರಿಪಡಿಸಲು ಸಿದ್ಧರಿದ್ದೇವೆ. ಅದ್ಯಾವುದರ ಬಗ್ಗೆಯೇ ಆಗಲಿ ಸರಿಪಡಿಸಿ ಮರುಮುದ್ರಣ ಮಾಡಲಾಗುವುದು ಎಂದರು.

ಪೀರ್ ಪಾಷಾ ದರ್ಗಾ ಕುರಿತು ಸಂಶೋಧನೆ ಮಾಡಲುವಂತೆ ಸ್ವಾಮೀಜಿಗಳು ಮನವಿ ನೀಡಿದ್ದಾರೆ ಪುರಾತತ್ವ ಇಲಾಖೆ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಗಳು ತಿಳಿಸಿದರು.

 

About The Author