ಸಿಎಂ ಯಾರು? ಯತೀಂದ್ರ ಹೇಳಿದ್ದು ನಿಜಾನಾ..?

ಸಿಎಂ, ಡಿಸಿಎಂ ಬ್ರೇಕ್‌ಫಾಸ್ಟ್‌ ಮೀಟಿಂಗ್‌ಗಳ ಬಳಿಕ, ನಾಯಕತ್ವ ಬದಲಾವಣೆ ಚರ್ಚೆಗಳಿಗೆ ತಾತ್ಕಾಲಿಕವಾಗಿ ಬ್ರೇಕ್‌ ಬಿದ್ದಿತ್ತು. ಇದೇ ವಿಚಾರವಾಗಿ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಬಿಗ್‌ ಅಪ್‌ಡೇಟ್‌ ಹೇಳಿಕೊಂದನ್ನ ನೀಡಿದ್ದಾರೆ.

ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರ್ತಾರೆ. ಕಾಂಗ್ರೆಸ್‌ನಲ್ಲಿ ಯಾವುದೇ ಪಟ್ಟದ ಕಿತ್ತಾಟವೂ ಇಲ್ಲ. ಇದನ್ನ ವಿಪಕ್ಷದವರು ಬಳಸಿಕೊಳ್ಳುತ್ತಿದ್ದಾರೆ. ಸಿಎಂ ಬದಲಾವಣೆ ಆಗುತ್ತಾರೆ ಎಂಬುದನ್ನ ಕನಸು ಕಾಣಬೇಕಷ್ಟೇ. ಅಂತಹ ಯಾವುದ ತಿಕ್ಕಾಟ ಇಲ್ಲ. ವೈಯಕ್ತಿಕವಾಗಿ 5 ವರ್ಷ ಪೂರೈಸುತ್ತಾರೆ ಎಂಬ ನಂಬಿಕೆ ಇದೆ. ಸಿಎಂರನ್ನ ಇದುವರೆಗೆ ಹೈಕಮಾಂಡ್‌ ನಾಯಕರು ಕರೆದಿಲ್ಲ. ಬದಲಾವಣೆ ಬಗ್ಗೆ ವಿಸ್ತ್ರತವಾಗಿ ಚರ್ಚೆಯನ್ನಯನ್ನೇ ಮಾಡಿಲ್ಲ ಎಂದು, ಎಂಎಲ್‌ಸಿ ಯತೀಂದ್ರ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಯತೀಂದ್ರ, ಕಿತ್ತಾಟ ಏನೂ ನಡೆದಿಲ್ಲ. ಡಿಕೆ ಶಿವಕುಮಾರ್‌ ಅವರು ನಾನೂ ಕೂಡ ಸಿಎಂ ಆಕಾಂಕ್ಷಿ. ನನಗೂ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಅದಕ್ಕೆ ಹೈಕಮಾಂಡ್‌, ಸದ್ಯಕ್ಕೆ ಅಂತಹ ಯಾವುದೇ ಪರಿಸ್ಥಿತಿ ಇಲ್ಲ. ಲೀಡರ್‌ಶಿಪ್‌ ಅಥವಾ ಮುಖ್ಯಮಂತ್ರಿಗಳ ಬದಲಾವಣೆ ಮಾಡುವ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ಅದು ಅಲ್ಲಿಗೆ ಮುಗೀತು. ಕಿತ್ತಾಟ ಅನ್ನೋದು ಯಾವುದೂ ಇಲ್ಲ. ಪ್ರತಿಪಕ್ಷಗಳು ಹುಟ್ಟುಹಾಕಿಕೊಂಡಿದ್ದಾರೆ ಅಷ್ಟೆ. ಸರ್ಕಾರ ಬಂದಾಗಿನಿಂದಲೂ ಹೇಳುತ್ತಲೇ ಬರ್ತಾರೆ. ಹೀಗಂತ ವಿಪಕ್ಷಗಳ ವಿರುದ್ಧ ಯತೀಂದ್ರ ಗುಡುಗಿದ್ದಾರೆ.

ಒಟ್ನಲ್ಲಿ ಯತೀಂದ್ರ ಹೇಳಿಕೆ ಡಿಕೆಶಿ ಮತ್ತು ಅವರ ಬಣಕ್ಕೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಈಗಾಗಲೇ ಬಿ.ಕೆ. ಹರಿಪ್ರಸಾದ್‌ ಜನವರಿ ಕ್ರಾಂತಿ ಬಗ್ಗೆ ಮಾತನಾಡಿದ್ದು, ಭಾರೀ ಕುತೂಹಲ ಹುಟ್ಟುಹಾಕಿದೆ. ನಿಮ್ ಪ್ರಕಾರ ಸಿಎಂ ಯಾರಾಗಿದ್ದರೆ ಚೆನ್ನ ಅನ್ನೋದನ್ನ ಕಾಮೆಂಟ್‌ ಮಾಡಿ ತಿಳಿಸಿ.

About The Author