Sunday, September 8, 2024

Latest Posts

Indira canteen: ರಾಜ್ಯಾದ್ಯಂತ ಹೊಸದಾಗಿ 188ಇಂದಿರಾ ಕ್ಯಾಂಟಿನ್ಗಳು ಆರಂಭ..!

- Advertisement -

ಮೈಸೂರು: ಕರ್ನಾಟಕದಲ್ಲಿ ಯಾರೂ ಸಹ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಅಧಿಕಾರವಧಿಯಲ್ಲಿ ಇಂದಿರಾ ಕ್ಯಾಂಟಿನ್ ಎಂಬ ಯೋಜನೆಯನ್ನು ಜಾರಿಗೆ ತಂದರು ಆ ಯೋಜನೆ ಯಶಸ್ವಿಯಾಗಿದ್ದು ಇಂದು ನಡೆದ ಸಭೆಯಲ್ಲಿ ಇಂದಿರಾ ಕ್ಯಾಂಟಿನ್  ಕುರಿತು ಮಾತನಾಡಿದರು.

ಹಸಿವುಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಬದ್ಧತೆ. ಇದಕ್ಕಾಗಿ ನಗರ ಪ್ರದೇಶಗಳ ಬಡವರು, ಆಟೋ ಚಾಲಕರು, ಕೂಲಿ ಕಾರ್ಮಿಕರು, ರೋಗಿಗಳು ಮುಂತಾದವರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸಲು ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದಿದ್ದೆವು. ನಮ್ಮ ಈ ಯೋಜನೆಗೆ ವ್ಯಕ್ತವಾದ ಅಭೂತಪೂರ್ವ ಜನಸ್ಪಂದನೆಯು ಇನ್ನಷ್ಟು ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯಲು ಪ್ರೇರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ತೆರೆಯಲು ರೂ.27 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಆದಷ್ಟು ಶೀಘ್ರ ರಾಜ್ಯಾದ್ಯಂತ ಹೊಸ ಕ್ಯಾಂಟೀನ್‌ಗಳು ತಲೆಯೆತ್ತಲಿವೆ.

ನಮ್ಮ ಮೊದಲ ‘100 ದಿನಗಳ’ ಆಡಳಿತದಲ್ಲಿ ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಗ್ಯಾರಂಟಿಗಳ ಈಡೇರಿಕೆಯ ಜೊತೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ನಮ್ಮೊಂದಿಗೆ ನಿಮ್ಮೆಲ್ಲರ ಸಹಕಾರವಿರಲಿ.

Siddaramaiah;ಬಿಜೆಪಿಗೆ ಚಾರ್ಜ್ ಶೀಟ್ ತರಲು ಆ ಪಕ್ಷಕ್ಕೆ ನೈತಿಕ ಹಕ್ಕಿಲ್ಲ; ಸಿಎಂ ಸಿದ್ದರಾಮಯ್ಯ

Electricity Problem :ವಿದ್ಯುತ್ ಕಡಿತದಿಂದಾಗಿ ಕಂಗಾಲಾದ ಅನ್ನದಾತರು.

Lokasabha election: ಲೋಕಸಭಾ ಚುನಾವಣೆ; ಜೋಶಿ ವಿರುದ್ಧ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ….?

- Advertisement -

Latest Posts

Don't Miss