Friday, October 18, 2024

Latest Posts

ದಾವಣಗೆರೆಯಲ್ಲಿ ‘ಪೊಗರು’ ಜೊತೆಯಾದ ‘ಟಗರು’… ಧ್ರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು…?

- Advertisement -

ಸೌತ್ ಇಂಡಸ್ಟ್ರೀಯಲ್ಲಿ ಸಖತ್ ಸೌಂಡ್ ಮಾಡ್ತಿರುವ ಪೊಗರು ಸಿನಿಮಾದ ಆಡಿಯೋ ಲಾಂಚ್ ನಿನ್ನೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ‌ ನಡುವೆ ಪೊಗರು ಸಿನಿಮಾದ ಆಡಿಯೋ‌ ವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಈ ವೇಳೆ ಧ್ರುವ ಡೈಲಾಗ್, ಡ್ಯಾನ್ಸ್ ಕಂಡು ಭಕ್ತಗಣ ಹುಚ್ಚೆದ್ದು ಕುಣಿದ್ರು.

ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ, ಅರ್ಜುನ್ ಸರ್ಜಾ, ರಾಘವೇಂದ್ರ ರಾಜಕುಮಾರ್ ಹಾಗೂ ದಾವಣಗೆರೆ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ನಿರ್ಮಾಪಕ ಬಿಕೆ ಗಂಗಾಧರ್,ನಿರ್ದೇಶಕ ನಂದಕಿಶೋರ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಮಾತನಾಡಿದ ಸಿದ್ದರಾಮಯ್ಯ, ಧ್ರುವ ಸರ್ಜಾ ಅವರ ತಾತ, ಮಾವ ಹಾಗೂ ಡಾ.ರಾಜ್​ಕುಮಾರ್​ ಅವರಂತೆ ಉನ್ನತ ಮಟ್ಟಕ್ಕೇರಲಿ ಅಂತಾ ಹಾರೈಸಿದರು.

ಅಂದಹಾಗೇ ಪೊಗರು ಸಿನಿಮಾ ಇದೇ ಶುಕ್ರವಾರ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗ್ತಿದ್ದು, ಧ್ರುವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ‌ ಮಂದಣ್ಣ ನಟಿಸಿದ್ದಾರೆ.

ಈಗಾಗ್ಲೇ ರಿಲೀಸ್ ಆಗಿರುವ ಪೊಗರು ಡೈಲಾಗ್ ಟೀಸರ್, ಸಾಂಗ್ಸ್ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿವೆ.

- Advertisement -

Latest Posts

Don't Miss