ಬಾಗಲಕೋಟೆ: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಸಿಎಂ ಆಗೋದಕ್ಕೆ ನೋಡ್ತಿದ್ದಾರೆ. ಅದು ಸಾಧ್ಯವೇ ಇಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಆರೋಪ ಮಾಡುತ್ತಿರೋ ಈಶ್ವರಪ್ಪ ವಿರುದ್ಧ ಕಿಡಿ ಕಾರಿದ್ದಾರೆ.
ಬಾಗಲಕೋಟೆಯಲ್ಲಿಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರೋ ಬಿಜೆಪಿ ಶಾಸಕ ಈಶ್ವರಪ್ಪ ಮನುಷ್ಯನೇ ಅಲ್ಲ. ಬಿಜೆಪಿ ಪಕ್ಷ ಈಶ್ವರಪ್ಪಾಗೆ ಸಂಸ್ಕೃತಿ ಕಲಿಸಿದೆ ಅನಿಸುತ್ತೆ. ಆದ್ರೆ ಈಶ್ವರಪ್ಪಾಗೆ ಸಂಸ್ಕೃತಿಯೇ ಇಲ್ಲ ಅಂತ ಟೀಕೆ ಮಾಡಿದ್ರು. ಅಲ್ಲದೆ ಈಶ್ವರಪ್ಪ ನಾಗರಿಕನೇ ಅಲ್ಲ ಅಂತ ಲೇವಡಿ ಮಾಡಿದ ಸಿದ್ದು, ನಾನು ಸಿಎಂ ಆಗಿದ್ದಾಯ್ತು, ಈಶ್ವರಪ್ಪಗೆ ಸಿಎಂ ಸ್ಥಾನ ಸಿಗೋದಿಲ್ಲ ಅಂತ ಹೇಳಿದ್ರು. ಅಷ್ಟೇ ಅಲ್ಲದೆ ಯಡಿಯೂರಪ್ಪ ಕೂಡ ಮತ್ತೆ ಮುಖ್ಯಮಂತ್ರಿಯಾಗೋಕೆ ಸಾಧ್ಯವೇ ಇಲ್ಲ ಅಂತ ಸಿದ್ದು ಟೀಕಿಸಿದ್ದಾರೆ.
ಜೆಡಿಎಸ್ ಜೊತೆ ಸೇರಿ ಹಾಳಾಯ್ತಾ ಕಾಂಗ್ರೆಸ್..?ಮಿಸ್ ಮಾಡದೇ ಈ ವಿಡಿಯೋ ನೋಡಿ