ಕರ್ನಾಟಕ ಟಿವಿ : ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಸತಾಯಿಸುತ್ತಿರುವಂತೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸತಾಯಿಸಿ ಕೊನೆಗೂ ವಿಪಕ್ಷ ನಾಯಕನನ್ನಾಗಿ ಘೋಷಣೆ ಮಾಡಿದೆ.. ಕಾಂಗ್ರೆಸ್ ಪಕ್ಷವನ್ನಅಧಿಕಾರಕ್ಕೆ ತಂದು 5 ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಪಡೆಯಲು ಇಷ್ಟೊಂದು ಒದ್ದಾಡುವ ಪರಿಸ್ಥಿತಿ ಯಾಕೆ ಬಂದು ಅಂತ ನೋಡೋದಾದ್ರೆ ಕಾಣಿಸೋದು ಕಾಂಗ್ರೆಸ್ ಪಕ್ಷದ ಮೂಲ ನಾಯಕರ ಸಿಟ್ಟು. ಕಾಂಗ್ರೆಸ್ನಲ್ಲಿನ ಸಿದ್ದರಾಮಯ್ಯ ವಿರೋಧಿ ಬಣ ಎಷ್ಟೇ ಸರ್ಕಸ್ ಮಾಡಿದ್ರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಉಳಿಬೇಕಾದರೆ ಸಿದ್ದರಾಮಯ್ಯ ಗೆ ವಿರೋಧ ಪಕ್ಷ ಸ್ಥಾನ ನೀಡೋದು ಸೋನಿಯಾ ಗಾಂಧಿಗೆ ಅನಿವಾರ್ಯವಾಗಿತ್ತು.. ಇದೀಗ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಮುಂದುವರೀಬೇಕಾದರೆ ಅನರ್ಹ ಶಾಸಕರ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಬೇಕಾಗಿದೆ.. ಇಲ್ಲದೇ ಹೋದಲ್ಲಿ ಮತ್ತೆ ಮೂಲ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸೋದು ಗ್ಯಾರಂಟಿ. ಮೋದಿ, ಅಮಿತ್ ಶಾ ಲೆಕ್ಕಾಚಾರದಂತೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಕಾಂಗ್ರೆಸ್ ನಲ್ಲಿ ಮತ್ತೆ ಗೊಂದಲ ಏರ್ಪಡಲಿದೆ. ಆದ್ರೆ, ಮತ್ತೆ ಕಾಡಿ ಬೇಡಿ ಸ್ಥಾನಮಾನ ಪಡೆಯುವ ಜಾಯಾಮಾನ ಸಿದ್ದರಾಮಯ್ಯದಲ್ಲ.. ಹೀಗಾಗಿ ಕಾಂಗ್ರೆಸ್ ನಲ್ಲಿನ ಅಸಮಾಧಾನ ತಾತ್ಕಾಲಿಕ ಶಮನವಾಗಿದೆ ಅಂತ ಭಾವಿಸಬಹುದು..