ಕರ್ನಾಟಕ ಟಿವಿ ಸಂಪಾದಕೀಯ : ಕನಕಪುರದ ಬಂಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಲು ತುದಿಗಾಲಲ್ಲಿ ನಿಂತಿದ್ದಾರೆ.. ಇನ್ನೇನೋ ಕೆಲವೇ ಕ್ಷಣಗಳಲ್ಲಿ ಘೋಷಣೆ ಮಾಡಿಬಿಡ್ತಾರೆ ಅಂತ ೆಲ್ರೂ ಕಾಯ್ತಾನೆ ಇದ್ದಾರೆ. ಆದ್ರೆ ಕಳೆದ ಮೂರ್ನಾಲ್ಕು ದಿನಗಳಿಂದ ಎಐಸಿಸಿ ನಾಯಕರು ಕೆಪಿಸಿಸಿ ಅಧ್ಯಕ್ಷರ ಹೆಸರನ್ನ ಘೋಷಣೆ ಮಾಡದೆ ಮುಂದಕ್ಕೆ ಹಾಕ್ತಿದೆ. ಯಾಕಂದ್ರೆ ಟಗರು ಸಿದ್ದರಾಮಯ್ಯ ಹಾಕಿರುವ ಕಂಡಿಷನ್ ಗೂ ಒಪ್ಪದೇ ನಂತರ ಸಿದ್ದು ತೆಗೆದುಕೊಳ್ಳಬಹುದಾದ ನಿರ್ಧಾರಕ್ಕೆ ಹೆದರಿ ಎಐಸಿಸಿ ಡಿಕೆಶಿ ಹೆಸರು ಘೋಷಣೆ ಮಾಡಲು ನಿಧಾನ ಮಾಡ್ತಿದೆಯಂತೆ
ವಿಪಕ್ಷ ನಾಯಕ, ಸಿಎಲ್ ಪಿ ಲೀಡರ್ ಪಟ್ಟಕ್ಕೆ ಸಿದ್ದ ಪಟ್ಟು..!
ಮೊದಲು ಎಂ.ಬಿ ಪಾಟೀಲದ ರನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಂತ ಸಿದ್ದರಾಮಯ್ಯ ಪಟ್ಟು ಹಾಕಿದ್ರು. ಆದ್ರೆ, ಋಣ ಸಂದಾಯಕ್ಕಾಗಿ ಡಿಕೆಶಿಯನ್ನ ಸೋನಿಯಾ, ರಾಹುಲ್ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡ್ತೀವಿ ಅಂತ ಖಡಕ್ಕಾಗಿ ಹೇಳಿಬಿಟ್ರು.. ನಂತರ ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಎರಡೂ ಹುದ್ದೆಯಲ್ಲಿ ಮುಂದುವರೆಯುತ್ತೇನೆ ಜೊತೆಗೆ ನೂತನ ಕಾರ್ಯಾಧ್ಯಕ್ಷರನ್ನಾಘಗಿ ಜಮೀರ್ ನೇಮಕ ಮಾಡಬೇಕು ಅಂತ ಪಟ್ಟು ಹಿಡಿದ್ರು. ಆದ್ರೆ, ಇದಕ್ಕೂ ಸೋನಿಯಾ ಗಾಂಧಿ ಒಪ್ಪಿಗೆ ಕೊಡ್ತಿಲ್ಲ. ಜಮೀರ್ ನೇಮಕ್ಕೆ ಇತರ ನಾಯಕರು ಅಪಸ್ವರ ಎತ್ತಿದ್ದಾರೆ.. ಜೊತೆಗೆ ಸಿಎಲ್ ಪಿ, ವಿಪಕ್ಷ ನಾಯಕ ಸೇರಿದಂತೆ ಎರಡು ಹುದ್ದೆಯಲ್ಲಿ ಒಂದರಲ್ಲಿ ಮಾತ್ರ ನೀವೂ ಮುಂದುವರೆಯಿರಿ ಅಂತ ಷರತ್ತು ಹಾಕಿ್ದ್ದಾರೆ.. ಯಾವಾಘ ಹೈಕಮಾಂಡ್ ತನ್ನ ಮಾತಿಗೆ ಒಪ್ಪದಿದ್ದಾಗ ಸಿದ್ದರಾಮಯ್ಯ ಸಿಡಿದೆದ್ದಿದ್ದಾರೆ.. ಬಹಿರಂಗವಾಗಿಯೇ ಮಹಾರಾಷ್ಟ್ರ ಮಾದರಿ ನಮ್ಮಲ್ಲಿ ಆಗಲ್ಲ.. ಇದು ಕರ್ನಾಟಕ ಇಲ್ಲಿ ಸಿಎಲ್ ಪಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಒಬ್ಬರೇ ಇರಬೇಕು ಅಂತ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.. ಇದಲ್ಲದೇ ಒಂದು ವೇಳೆ ನಮ್ಮ ಮಾತಿಗೆ ಮನ್ನಣೆ ನೀಡದಿದ್ದರೆ ನನ್ನ ಪಾಡಿಗೆ ನನ್ನನ್ನ ಬಿಟ್ಟುಬಿಡಿ ಅಂತ ಕಾಂಗ್ರೆಸ್ ಹೈಕಮಾಂಡ್ ಗೆ ಕಡೇ ಸಂದೇಶ ರವಾನೆ ಮಾಡಿ ಮೈಸೂರು ಕಡೆ ಹೆಜ್ಜೆ ಹಾಕಿದ್ದಾರೆ..
ಸಿದ್ದರಾಮಯ್ಯರಷ್ಟು ಡಿಕೆಶಿವಕುಮಾರ್ ಪ್ರಬಲರೇ..?
ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗ್ತಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬಂದಿದೆ.. ಆದ್ರೆ, ಹಳೇ ಮೈಸೂರು ಭಾಗದ ಕಾಂಗ್ರೆಸ್ ನಾಯರಕರನ್ನ ಹೊರತುಪಡಿಸಿ ಉತ್ತರಕರ್ನಾಟಕ ಭಾಗದಲ್ಲಿ ಡಿಕೆಶಿವಕುಮಾರ್ ರನ್ನ ಅಪ್ಪಿಕೊಳ್ಳಲು, ಒಪ್ಪಿಕೊಳ್ಳಲು ತಡವಾಗಬಹುದು.. ಆದ್ರೆ, ಸಿದ್ದರಾಮಯ್ಯ ಸಿಟ್ಟು ಕುರುಬ ಸಮುದಾಯ ಮತಗಳನ್ನ ಕಮಲ ಪಕ್ಷದ ಕಡೆ ತಿರುಗಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯಗೆ ಒಳ್ಳೆಯ ರೀತಿಯಲ್ಲಿ ವಂದನಾರ್ಪಣೆ ಹೇಳಿದ್ರೆ ಕಾಂಗ್ರೆಸ್ ಗೆ ತುಸು ಲಾಭವಾದೀತು.. ಕಡೆ ಗಳಿಗೆಯಲ್ಲಿ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಬೆಲೆ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಖಂಡಿಇತ ಬೆಲೆ ತೆರಬೇಕಾಗಬಹುದು..
ಸಿದ್ದರಾಮಯ್ಯ ಮಾತಿಗೆ ಕಾಂಗ್ರೆಸ್ ಹೈಕಮಾಂಡ್ ಬೆಲೆ ಕೊಡದಿದ್ದರೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಸೈಲೆಂಟ್ ಆಗ್ತಾರಾ..? ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ..