Monday, October 6, 2025

Latest Posts

ಸಿದ್ದರಾಮಯ್ಯ ಕನ್ನಡ ಪಂಡಿತ : ಕುಮಾರಸ್ವಾಮಿ ವ್ಯಂಗ್ಯ

- Advertisement -

Siddaramaiah VS HD Kumaraswamy ಹುಬ್ಬಳ್ಳಿ: ಸಾಧು ಸಂತರು ಧರಿಸುವ ಕೇಸರಿ ಶಿರವಸ್ತ್ರದ ಬಗ್ಗೆ ಲಘುವಾಗಿ ಹೇಳಿಕೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತೀವ್ರ ಚಾಟಿ ಬೀಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಎಷ್ಟೇ ಆಗಲಿ, ಅವರು ಕನ್ನಡ ಪಂಡಿತರಲ್ಲವೇ? ಎಂದು ಟಾಂಗ್ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮಾತುಗಳಿಗೆ ನಾನು ಮಹತ್ವ ನೀಡಲ್ಲ. ಈ ಸೂಕ್ಷ್ಮ ವಿಷಯದ ಬಗ್ಗೆ ನಾನು ಏನು ಹೇಳಬೇಕೋ ಅದನ್ನು ಸದನದಲ್ಲೇ ಹೇಳಿದ್ದೇನೆ ಎಂದರು.

ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸಿದ್ದರಾಮಯ್ಯ ಅವರು ನಿನ್ನೆ ಸದನದಲ್ಲಿ ನಿಲುವಳಿ ಸೂಚನೆ ಮೇಲೆ ಮಾತನಾಡಿದರು. ವರ್ತಮಾನದ ವಿಷಯಗಳನ್ನು ಬಿಟ್ಟು ಹಳೆಯ ವಿಷಯಗಳನ್ನು ಕೆದಕಿದರು. ಅವರ ಭಾಷಣದ ಕೊನೆ ಕ್ಷಣದಲ್ಲಿ ಯಾರೋ ಬಂದು ಕಿವಿಯಲ್ಲಿ ಹೇಳಿದರು ಅಂತ ಹಿಜಾಬ್ ಬಗ್ಗೆ ಮಾತನಾಡಿದರು ಎಂದರು ಕುಮಾರಸ್ವಾಮಿ ಅವರು. ಇನ್ನು ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿಗಳು, ಅವರು ಕನ್ನಡ ಪಂಡಿತರಿದ್ದಾರೆ. ನನಗಿಂತ ಕನ್ನಡವನ್ನು ಚೆನ್ನಾಗಿ ಮಾತನಾಡಬಲ್ಲ ಇನ್ನೊಬ್ಬ ನಾಯಕನಿಲ್ಲ ಎಂದು ನಿನ್ನೆಯ ಹೇಳಿಕೊಂಡಿದ್ದಾರೆ. ಸಂಧಿ, ಸಮಾಸ ಮತ್ತು ವ್ಯಾಕರಣದಲ್ಲಿ ಅವರು ಪಂಡಿತರಂತೆ. ಆ ಸಂಸ್ಕಾರದ ಮೂಸೆಯಿಂದ ಇಂಥ ಆಣಿಮುತ್ತುಗಳು ಉದುರುತ್ತವೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.

 

ಕರ್ನಾಟಕ ಟಿವಿ, ಹುಬ್ಬಳ್ಳಿ.

- Advertisement -

Latest Posts

Don't Miss