ಒಂದ್ ಕಡೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಪಟ್ಟಕ್ಕಾಗಿ ವಾರ್ ನಡೀತಿದೆ. ಮತ್ತೊಂದ್ ಕಡೆ ಸಿದ್ದು, ಡಿಕೆ ಬೆಂಬಲಿಗರು ಭಾರೀ ಟೆನ್ಶನ್ ಆಗಿದ್ದಾರೆ. ದೆಹಲಿಯಲ್ಲಿ ಸಿಎಂ, ಡಿಸಿಎಂ ಭೇಟಿ ವೇಳೆ ಏನೆಲ್ಲಾ ಆಯ್ತು. ಯಾರನ್ನ ಭೇಟಿ ಮಾಡಿದ್ರು. ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆಯಾಗಿದೆ ಅನ್ನೋದನ್ನ ತಿಳಿದುಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಜುಲೈ 9ರಂದು ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ, ಕೇವಲ ಸುರ್ಜೇವಾಲರನ್ನು ಭೇಟಿಯಾಗಿ ಇಂದು ವಾಪಸ್ ಆಗ್ತಿದ್ದಾರೆ. ಸಿದ್ದು ಬರುತ್ತಿದ್ದಂತೆ ಸಾಲು ಸಾಲು ಸಚಿವರು ಭೇಟಿಯಾಗೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಾನೇ 5 ವರ್ಷ ಸಿಎಂ ಅಂತಾ ಸಿದ್ದರಾಮಯ್ಯ ಹೇಳಿಕೆ, ಸಚಿವರು, ಶಾಸಕರಲ್ಲಿ ಭಾರೀ ಗೊಂದಲ ಮೂಡಿಸಿದೆ. ಹೀಗಾಗಿ ಇಂಥಾ ಹೇಳಿಕೆಗೆ ಕಾರಣ ಮತ್ತು ವಿವರಣೆ ಪಡೆಯಲು ಕಾಯುತ್ತಿದ್ದಾರೆ. ಸುರ್ಜೇವಾಲ ಕರ್ನಾಟಕದಲ್ಲೇ ಇದ್ರೂ ಸಿಎಂ, ಡಿಕೆಶಿ ದೆಹಲಿಗೆ ಹೋಗಿದ್ದಾರೆ. ಹೀಗಾಗಿ ಕುತೂಹಲ ಹೆಚ್ಚಾಗಿದೆ. ರಾಹುಲ್ ಗಾಂಧಿ ಏನಾದರೂ ಸಂದೇಶ ರವಾನಿಸಿದ್ದಾರಾ ಅಂತಾ ಕುತೂಹಲವೂ ಇದೆ.
ನಿನ್ನೆ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಸಿಎಂ ಸಿದ್ದು ಬಣದ ಸಚಿವರು ಭೇಟಿ ಕೊಟ್ಟಿದ್ರು. ಸಚಿವರಾದ ದಿನೇಶ್ ಗುಂಡೂರಾವ್, ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್, ಹೆಚ್.ಸಿ. ಮಹದೇವಪ್ಪ ಭೇಟಿ ನೀಡಿ, ಖರ್ಗೆ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿದ್ರು. ಖರ್ಗೆ ಭೇಟಿ ಬಳಿಕವೂ ಪ್ರತ್ಯೇಕವಾಗಿ ಮೀಟಿಂಗ್ ಮಾಡಿದ್ರು.
ದೆಹಲಿಯಲ್ಲಿ ಸಿಎಂ ಸುದ್ದಿಗೋಷ್ಠಿ ಮಾಡಿದ್ಮೇಲೆ ಮಾಧ್ಯಮಗಳ ಎದುರು ಸಿಎಂ ಪರ ಬ್ಯಾಂಟಿಗ್ ಮಾಡಿದ್ರು.
ಸಿಎಂ ಹೇಳಿದ್ಮೇಲೆ ಮ್ಯಾಚ್ ಕ್ಲೋಸ್ ಆಗಿದೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ರೆ, ಸಿಎಂ ಅವರೇ ಕ್ಲಿಯರ್ ಆಗೇ ಹೇಳಿದ್ಮೇಲೆ ಮತ್ತೇನಿದೆ. ಬೇರೆ ಚರ್ಚೆಯೇ ಇಲ್ಲ ಅಂತಾ ಮಹದೇವಪ್ಪ ಹೇಳಿದ್ರು.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಡಿ.ಕೆ. ಶಿವಕುಮಾರ್ ಬೆಂಬಲಿಗರು ಕೂಡ, ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.
ಡಿಕೆಶಿ ಪ್ರಮಾಣಿಕವಾಗಿ ಪಕ್ಷದ ಪರ ಕೆಲಸ ಮಾಡಿದ್ದಾರೆ. 2ನೇ ಅವಧಿಗೆ ಸಿಎಂ ಆಗಬೇಕು ಅಂತಾ ಮದ್ದೂರು ಶಾಸಕ ಉದಯ್ ಕುಮಾರ್ ಹೇಳಿದ್ರೆ, ಇವತ್ತಲ್ಲ ನಾಳೆ ಸಿಎಂ ಆಗೇ ಆಗ್ತಾರೆ ಅಂತಾ ಕುಣಿಗಲ್ ಶಾಸಕ ರಂಗನಾಥ್ ಹೇಳಿದ್ದಾರೆ. ಇನ್ನು, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಶಿವಕುಮಾರ್ ಗೆ ಶಾಸಕರ ಬೆಂಬಲವೂ ಇದೆ. ಆ ಶಕ್ತಿಯೂ ಇದೆ. ಸಿಎಂ ಆಗೇ ಆಗ್ತಾರೆ ಅಂತಾ ಡಿಕೆ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನು, ಸಿಎಂ-ಡಿಸಿಎಂ ಬೆಂಬಲಿಗರ ಜಟಾಪಟಿ ಮಧ್ಯೆ, ವಿರೋಧ ಪಕ್ಷಗಳು ಮತ್ತೊಂದು ಟ್ವಿಸ್ಟ್ ಕೊಟ್ಟಿವೆ. ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಸ್ಥಾನ ಪಲ್ಲಟ ಆಗೋದು ಫಿಕ್ಸ್ ಅಂತಾ ಭವಿಷ್ಯ ನಡಿದಿದ್ದಾರೆ.
ಖರ್ಗೆ ಸಂಧಾನ ಮಾಡ್ತಿದ್ದಾರೆ. ಆದರೆ ಡಿಕೆಶಿ ಒಪ್ಪುತ್ತಿಲ್ಲ. ನವೆಂಬರ್, ಡಿಸೆಂಬರ್ ನಲ್ಲಿ ಸಿಎಂ ಬದಲಾವಣೆ ಆಗೋದು ಫಿಕ್ಸ್. ಕಾಂಗ್ರೆಸ್ ನಲ್ಲಿ ಪ್ರಳಯ ಆಗೋಕೆ ಶುರುವಾಗಿದೆ. ದೆಹಲಿಗೆ ತಲುಪಿ ವಿಪರೀತ ಹಂತಕ್ಕೆ ಹೋಗಿದೆ. ಎಲ್ಲಾ ಶಾಸಕರು, ಸಚಿವರಿಗೆ ಆತಂಕ ಶುರುವಾಗಿದೆ. ಕೆಲವು ಮಂತ್ರಿಯಾಗಬೇಕು ಅಂತಾ ಕಾಯ್ತಿದ್ರೆ, ಕೆಲವರು ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಅಂತಾ ಕಾಂಗ್ರೆಸ್ಸಿಗರ ಕಾಲು ಎಳೆದಿದ್ದಾರೆ.
ವೀಕ್ಷಕರೆ, ಕಾಂಗ್ರೆಸ್‌ನಲ್ಲಿ ಸೆಪ್ಟೆಂಬರ್ ಕ್ರಾಂತಿ ಆಗುತ್ತಾ? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.