ಕರ್ನಾಟಕ ಟಿವಿ : ಬಿಜೆಪಿಗೆ ಮಾನ ಮರ್ಯಾದೆ ಇದೆಯಾ..? ಹೌದು ಲಕ್ಷ್ಮಣ್ ಸವದಿಯನ್ನ ಡಿಸಿಎಂ ಮಾಡಿರುವ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಬೆಳಗಾವಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೋತವರನ್ನ ಸಚಿವರನ್ನಾಗಿ ಮಾಡಿದ್ದಾರೆ. ಸವದಿ ಸದನದಲ್ಲೇ ಬ್ಲೂ ಫಿಲ್ಮ್ ನೋಡಿದ್ರು ಇಂಥಹವರನ್ನ ಸಚಿವರನ್ನಾ ಮಾಡಿದ್ದಾರೆ ಅಂತ ಬಿಜೆಪಿ ನಾಯಕರನ್ನ ಸಿದ್ದರಾಮಯ್ಯ ಟೀಕಿಸಿದ್ರು.
ಉಮೇಶ್ ಕತ್ತಿ ಕರೆದೆ, ಅವ್ರು ಬರಲಿಲ್ಲ
ನನಗೆ ಕಣ್ಣು ಆಪರೇಷನ್ ಆದಾಗ ಉಮೇಶ್ ಕತ್ತಿ ಕಾಲ್ ಮಾಡಿದ್ದ. ಬಾರಯ್ಯ ಮಾತಾಡೋಣ ಅಂತ ಕರೆದೆ. ಆದ್ರೆ ಕತ್ತಿ ಬರ್ಲಿಲ್ಲ ಅಂತ ಉಮೇಶ್ ಕತ್ತಿ ವಿಚಾರದ ಊಹಾಪೋಹಕ್ಕೆ ಸಿದ್ದರಾಮಯ್ಯ ತೆರೆ ಎಳೆದ್ರು.
ಸರ್ಕಾರ ಎಷ್ಟು ದಿನ ಇರುತ್ತೆ ನೀವೆ ಹೇಳಿ
ಇನ್ನು ಯಡಿಯೂರಪ್ಪ ರಾಜೀನಾಮೆ ಕೊಟ್ಟು ಅನರ್ಹ ಆಗಿರುವ ಶಾಸಕರನ್ನ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಹೀಗಾಗಿ ಸರ್ಕಾರ ಎಷ್ಟು ದಿನ ಇರುತ್ತೆ ಅನ್ನೋದನ್ನ ನೀವೆ ಹೇಳ್ಬೇಕು ಎಂದು ಸಿದ್ದರಾಮಯ್ಯ ಪತ್ರಕರ್ತರನ್ನ ಕಿಚಾಯಿಸಿದ್ರು.