5 ವರ್ಷ ನಾನೇ ಸಿಎಂ. ನಾಯಕತ್ವ ಬದಲಾವಣೆಯನ್ನ ಡಿ.ಕೆ ಶಿವಕುಮಾರ್ ಕೇಳಿಯೇ ಇಲ್ಲ. ಹೀಗಾಗಿ ಬದಲಾವಣೆಯ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ವರಿಷ್ಠರ ಭೇಟಿಗೆ ತೆರಳಿರುವ ಸಿದ್ದರಾಮಯ್ಯ, ದೆಹಲಿಯಲ್ಲೇ ಡಿಕೆಶಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಭೇಟಿಗೂ ಮುನ್ನವೇ, ತನ್ನ ಲೈನ್ ಕ್ಲಿಯರ್ ಮಾಡಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ದೆಹಲಿಯಲ್ಲಿ ದಿಢೀರ್ ಸುದ್ದಿಗೋಷ್ಟಿ ನಡೆಸಿದ್ದು, ಮುಂದಿನ 5 ವರ್ಷ ನಾನೇ ಸಿಎಂ ಅಂತಾ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಡಿಕೆಶಿಗೆ ಸಿದ್ದು 6 ಸಿಗ್ನಲ್
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸಿದ್ದರಾಮಯ್ಯ, 6 ಸಂದೇಶಗಳನ್ನ ನೀಡಿದ್ದಾರೆ.
ನಂಬರ್ 1: ಸಿಎಂ ಖುರ್ಚಿ ಖಾಲಿ ಇಲ್ಲ. ಯಾವುದೇ ರಾಜಕೀಯ ಕ್ರಾಂತಿಯೂ ಆಗಲ್ಲ. ಸದ್ಯಕ್ಕೆ ನಾಯಕತ್ವ ವಿಚಾರ ಚರ್ಚೆಗೆ ಬಂದಿಲ್ಲ. ಪವರ್ ಶೇರಿಂಗ್ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ತೀರ್ಮಾನಕ್ಕೆ ಇಬ್ಬರೂ ನಾಯಕರೂ ಬದ್ಧರಾಗಿದ್ದೇವೆ.
ನಂಬರ್ 2: ಮುಂದಿನ 5 ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಮಾಧ್ಯಮಗಳಲ್ಲಿ ಬಿಟ್ರೆ ಪಕ್ಷದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿಲ್ಲ. ಕೆಲವು ಶಾಸಕರು ಪ್ರೀತಿಯಿಂದ, ಅಭಿಮಾನದಿಂದ ಹೇಳ್ತಾರೆ. ಕೆಲವರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕೆಂದು ಹೇಳ್ತಾರೆ. ಅದೆಲ್ಲಾ ಪಕ್ಷದ ನಿರ್ಧಾರವಲ್ಲ. ಅವರವರ ವೈಯಕ್ತಿಕ ಅಭಿಪ್ರಾಯ. ವದಂತಿಗಳಿಗೆ ಮಹತ್ವ ಕೊಡುವುದು ಬೇಡ.
ನಂಬರ್ 3: 2023ರಂತೆಯೇ 2028ಕ್ಕೂ ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.
ನಂಬರ್ 4: ಡಿಕೆ ಶಿವಕುಮಾರ್ ಕೆಲವರ ಬೆಂಬಲವಿರಬಹುದು ಅಷ್ಟೇ. ಆದರೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ ಇಲ್ಲ ಅಂತಾ, ರಾಷ್ಟ್ರ ರಾಜಧಾನಿಯಲ್ಲೇ ಕುಳಿತು, ಬಹಿರಂಗವಾಗಿ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ನಂಬರ್ 5: ಯಾವುದೇ ರಾಜಕೀಯ ಕ್ರಾಂತಿ ಅಸಾಧ್ಯ ಅಂತಾ, ವಿರೋಧಿ ಬಣಕ್ಕೆ ಸಿದ್ದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ನನ್ನ ಎದುರು ಯಾರ ಆಟವೂ ನಡೆಯಲ್ಲ ಅಂತಾ ಪರೋಕ್ಚವಾಗಿ ಎಚ್ಚರಿಕೆ ನೀಡಿದ್ದಾರೆ.
ನಂಬರ್ 6: ನಾಯಕತ್ವ ಬದಲಾವಣೆ ಬಗ್ಗೆ, ಪಕ್ಷದಲ್ಲಂತೂ ಯಾವುದೇ ಚರ್ಚೆ ಇಲ್ಲ. ಸುರ್ಜೇವಾಲ ಕೂಡ ಇದನ್ನೇ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ಸಿದ್ದು ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ರಾಜಕೀಯ ಕೇಂದ್ರ ಸ್ಥಾನದಲ್ಲೇ ಕುಳಿತು ಸಿದ್ದರಾಮಯ್ಯ ಆರ್ಭಟಿಸಿದ್ದು, ಕಾಂಗ್ರೆಸ್ ನೊಳಗೆ ಯಾವ ಕಿಚ್ಚು ಹೊತ್ತಿಸುತ್ತೋ? ಡಿಕೆಶಿ ಮತ್ತು ಅವರ ಬಣ ಹೇಗೆ ರಿಯಾಕ್ಟ್ ಮಾಡ್ತಾರೋ? ಹೈಕಮಾಂಡ್ ವರಿಷ್ಠರು ಏನ್ ಹೇಳ್ತಾರೆ ಅನ್ನೋದು ಭಾರೀ ಕುತೂಹಲ ಮೂಡಿಸಿದೆ.
2023ರಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮಧ್ಯೆ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಅನ್ನೋ ಮಾತಿದೆ. ಈ ಮಾತನ್ನು ಸಂದರ್ಶನವೊಂದರಲ್ಲಿ ಹೇಳಿದ್ದ ಡಿ.ಕೆ ಶಿವಕುಮಾರ್ ಅವರು ಸಿಎಂ ಕುರ್ಚಿಗಾಗಿ ಕಾಯುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯನವರು ಕುರ್ಚಿ ಬಿಟ್ಟುಕೊಡೋದಿಲ್ಲ ಎಂದು ಲಕ್ಷ್ಮಣ ರೇಖೆಯನ್ನೇ ಎಳೆದಿದ್ದಾರೆ.
ವೀಕ್ಷಕರೇ.. ಸಿಎಂ ಸಿದ್ದರಾಮಯ್ಯನವರ ಈ ಸ್ಪಷ್ಟ ಸಂದೇಶಕ್ಕೆ ಡಿ.ಕೆ. ಶಿವಕುಮಾರ್ ಸುಮ್ನೇ ಇರ್ತಾರಾ.. ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.