Thursday, October 23, 2025

Latest Posts

ಅರಸು, ಬಂಗಾರಪ್ಪ ಸಿದ್ದರಾಮಯ್ಯ ಬಳಿಕ ಸತೀಶ್‌ ಅಖಾಡಕ್ಕೆ ಎಂಟ್ರಿ!

- Advertisement -

ಸಿದ್ದರಾಮಯ್ಯ ಉತ್ತರಾಧಿಕಾರಿ ಬಗ್ಗೆ ಪುತ್ರ ಯತೀಂದ್ರ ಹೇಳಿಕೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಬೆಳಗ್ಗೆಯಷ್ಟೇ ತುಂಬಾ ನಾಜೂಕಾಗಿ ಉತ್ತರಿಸಿದ್ದ ಸತೀಶ್‌ ಜಾರಕಿಹೊಳಿ ಸಂಜೆಯಾಗುವಷ್ಟರಲ್ಲಿ ರೆಬೆಲ್‌ ಆಗಿದ್ದಾರೆ. ಡೈರೆಕ್ಟ್‌ ಆಗಿ ಅಖಾಡಕ್ಕಿಳಿಯುವ ಸುಳಿವು ನೀಡಿದ್ದಾರೆ. ಈ ಬಗ್ಗೆ ಕಿತ್ತೂರಿನಲ್ಲಿ ಜನರ ಜೊತೆ ಸೇರಿ ಮಿರ್ಚಿ ತಿನ್ನುತ್ತಾ, ಬಹಿರಂಗವಾಗಿ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಪರಂಪರೆ ಇದೆ. ದೇವರಾಜ ಅರಸ್‌ ನಂತರ ಬಂಗಾರಪ್ಪನವ್ರು, ಬಳಿಕ ಸಿದ್ದರಾಮಯ್ಯನವ್ರು. ಈಗ ಸಿದ್ದರಾಮಯ್ಯ ಬಳಿಕ ಯಾರೆಂಬ ಚರ್ಚೆ ರಾಜ್ಯದಲ್ಲಿ ನಡೀತಿದೆ. ಅದಕ್ಕೆ ಉತ್ತರವನ್ನು ಈಗಲೇ ಹೇಳೋದಕ್ಕೆ ಆಗಲ್ಲ. ಬರುವ ದಿನಗಳಲ್ಲಿ ಸಿಗಲಿದೆ.

ಅಹಿಂದ, ಒಬಿಸಿ, ಎಸ್‌ಸಿ ಎಸ್‌ಟಿ ನಾಯಕ ಅನ್ನೋದು ಸಹಜವಾಗೇ ಸೃಷ್ಟಿಯಾಗುತ್ತದೆ. ಇತಿಹಾಸದಲ್ಲಿ ಅರಸರಿಂದಲೂ ಕಂಟಿನ್ಯೂ ಆಗಿದೆ. ರಾಜಕೀಯ ಇರೋವರೆಗೂ ಮುಂದುವರೆಯುತ್ತದೆ. ನಾವು ಬರಬಹುದು ಅಥವಾ ಇನ್ಯಾರೋ ಬರಬಹುದು. ಆದರೆ ಅಹಿಂದ ನಾಯಕರು ಯಾರಾದರೂ ಬರಲೇಬೇಕು.

ನಾವು ಸೋತಾಗಲೂ ಬೇಜಾರ್‌ ಮಾಡಿಕೊಳ್ಳಲ್ಲ. ಗೆದ್ದಾಗಲೂ ಬಹಳ ಖುಷಿ ಪಡೋದಿಲ್ಲ. ಯಾವಾಗಲೂ ಬ್ಯಾಲೆನ್ಸ್‌ ಮಾಡುತ್ತೇವೆ. ಸಮಯ ಬಂದಾಗ ಸರಿಯಾಗಿ ಉಪಯೋಗಿಸಿಕೊಳ್ಳುವುದು ನಮ್ಮ ವ್ಯವಸ್ಥೆಯಾಗಿದೆ. ಕರ್ನಾಟಕದಲ್ಲಿ ಅಹಿಂದ ನಾಯಕರು ಯಾರು ಅನ್ನೋ ಪ್ರಶ್ನೆ ಹುಟ್ಟಿದೆ. ಕಾಲ ಬಂದಾಗ ಎಲ್ಲದ್ದಕ್ಕೂ ಉತ್ತರ ಸಿಗಲಿದೆ.

ಅಹಿಂದ ಸಭೆಯಲ್ಲಿ ಸಂದರ್ಭಕ್ಕೆ ತಕ್ಕಂತೆ ಯತೀಂದ್ರ ಹೇಳಿದ್ದಾರೆ ಅಷ್ಟೇ. ನಾಯಕತ್ವ ವಹಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಈ ಬಗ್ಗೆ ಸಂದರ್ಭ ಬಂದ್ರೆ ನೋಡೋಣ. ಸದ್ಯಕ್ಕೆ ಸಿಎಂ ಆಗಿ ಸಿದ್ದರಾಮಯ್ಯನವರು ಇದ್ದಾರೆ. ಅವರು ಇರುವಾಗ ಮುಂದಿನ ಸಿಎಂ ಪ್ರಶ್ನೆ ಉದ್ಭವಿಸಲ್ಲ.

ನನಗೆ ನಾಯಕತ್ವ ಸಿಗದಿದ್ರೆ ಬೇರೆ ಯಾರಾದ್ರೂ ಅಹಿಂದ ನಾಯಕರು ಹುಟ್ಟೇ ಹುಟ್ಟುತ್ತಾರೆ. ಸಿದ್ದರಾಮಯ್ಯನವರಂತೆ ಯಾರಾದರೂ ಹುಟ್ಟಲೇಬೇಕು. ಆ ಸಂಪ್ರದಾಯವನ್ನು ರಕ್ಷಣೆ ಮಾಡಲೇಬೇಕು. ಸಿದ್ದರಾಮನವರು ಅಧಿಕಾರದಲ್ಲಿ ಇದ್ದಾಗ ಮತ್ತು ಇಲ್ಲದಿದ್ದಾಗಲೂ ರಕ್ಷಣೆ ಕೆಲಸ ಮಾಡಿದ್ದಾರೆ. ಆ ರೀತಿಯ ನಾಯಕತ್ವವನ್ನು ಜನರು ಬಯಸುತ್ತಾರೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಒಟ್ನಲ್ಲಿ ಅಹಿಂದ ನಾಯಕರೇ ಸಿಎಂ ಆಗಬೇಕೆಂಬ ಆಸೆ ಹೊರಹಾಕಿದ್ದಾರೆ.

- Advertisement -

Latest Posts

Don't Miss