Friday, August 29, 2025

Latest Posts

ಸಿದ್ದುನೇ ಮಾಸ್ಟರ್‌ಮೈಂಡ್‌ – R. ಅಶೋಕ್‌ ಹೊಸ ಬಾಂಬ್

- Advertisement -

ಎಡಪಂಥಿಯರಿಗೆ ಓನರ್‌, ಮಾಸ್ಟರ್‌ ಮೈಂಡ್‌ ಸಿದ್ದರಾಮಯ್ಯ. ಇವರೆಲ್ಲರೂ ಸೇರುತ್ತಿದ್ದದ್ದು ಸಿದ್ದರಾಮಯ್ಯ ಮನೆಯಲ್ಲಿ. ಧರ್ಮಸ್ಥಳ ಪ್ರಕರಣವನ್ನು, ಎಸ್‌ಐಟಿಗೆ ಕೊಡೋಕೆ ಆದೇಶ ಮಾಡಿದ್ದು ಇದೇ ಎಡಪಂಥಿಯರು. ಇಂಥಾ 10 ಸಭೆ ಮಾಡಲಿ. ಇಂದು ರಾಜ್ಯದ ಜನರಿಗೆ ಸ್ಪಷ್ಟವಾಗಿದೆ. ಎಸ್‌ಐಟಿಯ ಮೊಹಾಂತಿಯವರ ಹೆಸರನ್ನು ಕೂಡ, ಈ ಎಡಪಂಥಿಯರೇ ಹೇಳಿದ್ದು. ಈಗ ಇಲ್ಲ ಅಂತಾ ಹೇಳಿದ್ರೆ, ಜನ ಸರಿಯಾದ ಪಾಠ ಕಲಿಸ್ತಾರೆ.

ಎಸ್‌ಐಟಿಯನ್ನು ರಚನೆ ಮಾಡೋಕೆ ಹೇಳಿದವರು ಈ ಕಮ್ಯೂನಿಸ್ಟ್‌ ಪಾರ್ಟಿಯವ್ರು. ಯಾರಿಗೆ ಈ ದೇಶದ ಬಗ್ಗೆ ಕಡಿಮೆ ನಿಷ್ಠೆ ಇರುತ್ತದೆಯೋ ಅವರೇ ಮಾತನಾಡಿದ್ದಾರೆ. ಮಾಸ್ಕ್‌ ಮ್ಯಾನ್‌ ಬಣ್ಣ ಬಯಲಾಗುತ್ತಿದೆ. ಅವನಿಗೆ ಮೂರು ಜನ ಹೆಂಡತಿಯರು.. ಹೆಂಡತಿಯನ್ನು ಹೊಡೆಯುತ್ತಿದ್ದನಂತೆ. ಮೊದಲ ಹೆಂಡತಿಯೇ ಹೇಳಿದ್ದಾರೆ. ಇನ್ನಿಬ್ಬರು ಏನ್‌ ಹೇಳ್ತಾರೋ ಗೊತ್ತಿಲ್ಲ. ಇನ್ನೊಂದೆಡೆ, ಅನನ್ಯಾ ಭಟ್‌ ಕೇಸ್‌. ಇಲ್ಲದೇ ಇರುವ ಹೆಣ್ಣು ಮಗುವನ್ನು ಹುಟ್ಟು ಹಾಕಿ ಡಾಕ್ಟರ್‌ ಓದಿಸಿದ್ದಾರೆ.

ಈ ಎಡಪಂಥಿಯರು ಯಾವ ರೀತಿ ವ್ಯೂಹ ರಚನೆ ಮಾಡಿ, ಧರ್ಮಸ್ಥಳವನ್ನು ಹಾಳು ಮಾಡಬೇಕು. ತಿರುಪತಿ ವೆಂಕಟೇಶ್ವರನನ್ನ ಹಾಳು ಮಾಡಬೇಕು. ಅಯ್ಯಪ್ಪ ಸ್ವಾಮಿಯನ್ನು ಹೇಗೆ ಹಾಳು ಮಾಡ್ಬೇಕು ಅನ್ನೋದೇ ಇವರ ಸ್ಟ್ಯಾಂಡ್‌. ರಾಜ್ಯದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು.

ನಮಗೆ ಯಾವುದೇ ದೇವಸ್ಥಾನದ ಬ್ರ್ಯಾಂಡ್‌ ಇಲ್ಲ. ಹಿಂದೂ ದೇವಸ್ಥಾನಗಳ ಪರವಾಗಿ ನಾವು ನಿಲ್ಲುತ್ತೇವೆ. ಈಗಾಗಲೇ ರಾಜ್ಯಾಧ್ಯಕ್ಷರು ಘೋಷಣೆ ಮಾಡಿದ್ದಾರೆ. ಹಿಂದೂ ದೇವಾಲಯಕ್ಕೆ ಅಪಮಾನವಾದ್ರೆ ನಾವು ಸುಮ್ಮನೆ ಬಿಡೋದಿಲ್ಲ ಅಂತಾ, ಬಹಿರಂಗವಾಗೇ ಆರ್‌. ಅಶೋಕ್‌‌ ಎಚ್ಚರಿಸಿದ್ದಾರೆ.

- Advertisement -

Latest Posts

Don't Miss