State News:
Feb:24: ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಯ್ಯ ಕಾಂಗ್ರೆಸ್ ಭವಿಷ್ಯ ವನ್ನು ನುಡಿದಿದ್ದಾರೆ. ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿರೋ ಸಮಯದಲ್ಲೇ ಸಿದ್ದರಾಮಯ್ಯ ವಿಭಿನ್ನ ಭವಿಷ್ಯ ನುಡಿದಿದ್ದಾರೆ. ಹೌದು ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂಬುವುದಾಗಿ ಹೇಳಿದ್ದಾರೆ. ಯುವಕರೆಲ್ಲರು ಉತ್ಸುಕರಾಗಿದ್ದಾರೆ. ಚುನಾವಣೆಗಾಗಿ ಕಾಯುತ್ತಿದ್ದಾರೆ. ದೇವರಹಿ ಪ್ಪರಗಿಯ ಬಿಎಲ್ ಡಿಯ ಶಾಲಾ ಮೈದಾನದಲ್ಲಿ ಪ್ರಜಾಧ್ವನಿಯನ್ನು ಉದ್ಘಾಟಿಸಿ ಸಿದ್ದರಾಮಯ್ಯ ಮಾತನಾಡಿದರು. ವಿಧಾನಸೌಧದ ಗೋಡೆಗಳು ಕೂಡಾ ಬಿಜೆಪಿ ಭ್ರಷ್ಟ ಸರಕಾರದಿಂದಾಗಿ ಲಂಚ ಲಂಚ ಎಂದು ಬುಸುಗುಡುತ್ತಿವೆ. ಬಿಜೆಪಿ 600 ಭರವಸೆಯಲ್ಲಿ 51 ಭರವಸೆಗಳನ್ನು ಮಾತ್ರ ಈಡೇರಿಸಿದೆ. ನಾವು 165 ಭರವಸೆಯಲ್ಲಿ 158 ಭರವಸೆಯನ್ನು ಈಡೇರಿಸಿದ್ದೇವೆ. ಮತ್ಯಾಕೆ ಬೇಕು ನಮಗೆ ಬಿಜೆಪಿ ಸರಕಾರ ನಾವು ಇವತ್ತಿನಿಂದ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಪಣ ತೊಡೋಣ ಎಂದು ಬಿಜೆಪಿ ಗೆ ಕುಟುಕಿದರು.
ಜೆ.ಪಿ ನಡ್ಡಾ ಶೃಂಗೇರಿ ಭೇಟಿ ಬೆನ್ನಲ್ಲೇ ಮಠಕ್ಕೆ ಭೇಟಿ ನೀಡಲಿರುವ ಹೆಚ್ ಡಿ ಕೆ ..!
ಚುನಾವಣಾ ಟಿಕೆಟ್ ಗಾಗಿ ಕಿಡ್ನಿ ಮಾರಲು ಮುಂದಾದ ಕಾಂಗ್ರೆಸ್ ಅಭ್ಯರ್ಥಿ !