Banglore News : ಇತ್ತೀಚೆಗೆ ಕೇಂದ್ರ ವಿಪಕ್ಷ ನಾಯಕರ ಸಭೆ ಮುಗಿದು ಸ್ವಲ್ಪ ರಿಲಾಕ್ಸ್ ಮೋಡ್ ನಲ್ಲಿರೋ ಸಿಎಂ ಇಂದು ಜುಲೈ 19 ರಂದು ಸಾರ್ವಜನಿಕರ ಬಗ್ಗೆ ಗಮನ ಹರಿಸಿದ್ದಾರೆ.ಇಂದು ಮುಂಜಾನೆಯ ತಮ್ಮ ನಿವಾಸದ ಬಳಿಯಲ್ಲಿ ಸಿದ್ದರಾಮಯ್ಯ ಸಾರ್ವಜನಿಕರಿಂದ ಅಹವಾಲನ್ನು ಸ್ವೀಕರಿಸಿದರು.
ಇನ್ನು ಸಿಎಂ ಸಿದ್ದರಾಮಯ್ಯರ ಭೇಟಿಗಾಗಿ ಜನಸಾಗರವೇ ಸೇರಿತ್ತು. ಇನ್ನು ಬ್ಯಾರಿಗೇಡ್ ಬದಿಯಲ್ಲಿ ನಿಂತಿದ್ದ ಸಾರ್ವಜನಿಕರು ನಾ ಮುಂದು ತಾ ಮುಂದು ಎಂದು ಆಗಮಿಸಿ ಸಿದ್ದರಾಮಯ್ಯರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಜೊತೆಗೆ ಸಿಎಂ ಸಿದ್ದರಾಮಯ್ಯ ಸಮಸ್ಯೆ ಹೇಳಿಕೊಂಡು ಬಂದಿದ್ದ ಸಾರ್ವಜನಿಕರಿಂದ ಅಹವಾಲನ್ನು ಸ್ವೀಕರಿಸಿ ಪ್ರತಿಯೊಬ್ಬರ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಭರವಸೆಯನ್ನು ನೀಡಿದರು. ಸಿಎಂ ಸಿದ್ದರಾಮಯ್ಯ ಜೊತೆ ಬೆಂಗಾವಲು ಪಡೆಯು ರಕ್ಷಣಾ ಕಾರ್ಯದಲ್ಲಿ ತೊಡಗಿತ್ತು.ಸಾರ್ವಜನಿಕರು ಅನೇಕ ಪತ್ರಗಳ ,ಮೂಲಕವಾಗಿ ತಮ್ಮ ಸಮಸ್ಯೆಗಳನ್ನು ಸಿಎಂ ಮುಂದೆ ತೋಡಿಕೊಂಡರು.