- Advertisement -
State News:
ಸಿದ್ದರಾಮಯ್ಯ ನೀಡಿದ ಆರ್ ಎಸ್ ಎಸ್ ಬ್ಯಾನ್ ಮಾಡಬೇಕು ಎಂಬ ಹೇಳಿಕೆಗೆ ಇದೀಗ ಕೇಸರಿ ಪಡೆ ಕೆರಳಿ ಕೆಂಡವಾಗಿದೆ. ಸಿದ್ದು ವಿರುದ್ದ ಮಾತಿನ ಬಾಣವನ್ನು ಬಿಟ್ಟಿದ್ದಾರೆ. ಸಿದ್ದು ಹೇಳಿಕೆಗೆ ಪ್ರತಾಪ್ ಸಿಂಹ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಂತಹ ಸಂದರ್ಭದಲ್ಲಿ ಇಂತಹ ಸಂಘಟನೆಗಳು ಬಲಶಾಲಿಯಾದವುಗಳು. ಆರ್ ಎಸ್ ಎಸ್ ಯಾವುದೇ ದೇಶ ದ್ರೋಹದ ಕೆಲಸ ಮಾಡುತ್ತಿಲ್ಲ. ಆರ್ ಎಸ್ ಎಸ್ ಕೋಮು ಗಲಬೆ ಸೃಷ್ಟಿಸಿದಂತಹ ಒಂದು ಸನ್ನಿವೇಶದ ಉದಾಹರಣೆ ಸಿಎಂ ನೀಡಲಿ , ಸಿದ್ದರಾಮಯ್ಯ ದೇಶದ ಜನತೆಯನ್ನು ಕ್ಷಮೆ ಕೇಳಬೇಕು ಎಂಬುವುದಾಗಿ ಪ್ರತಾಪ್ ಸಿಂಹ ಸಿದ್ದರಾಮಯ್ಯ ವಿರುದ್ದ ಗುಡುಗಿದ್ದಾರೆ.
“ಪಿಎಫ್‌ಐ ನಿಷೇಧದ ಕೇಂದ್ರ ಸರಕಾರದ ಆದೇಶವನ್ನು ನಾನು ಸ್ವಾಗತಿಸುತ್ತೇನೆ”: ಆರಗ ಜ್ಞಾನೇಂದ್ರ
- Advertisement -