Banglore News:
ಸಿದ್ದರಾಮಯ್ಯ ದಿನಕ್ಕೊಂದು ಹೇಳಿಕೆ ವಿಚಾರ ಈಗ ವಿವಾದಕ್ಕೆ ಎಡೆಮಾಡಿ ಕೊಟ್ಟಿದೆ. ಒಂದೆಡೆ ಕೇಸರಿ ಪಡೆ ಸಿದ್ದು ಹೇಳಿಕೆಗೆ ತಿರುಗೇಟು ನೀಡುತ್ತಿದ್ದರೆ ಮತ್ತೊಂದೆಡೆ ಜೆಡಿಎಸ್ ಮುಖಂಡ ಎಚ್.ಡಿ.ಕೆ ಸಿದ್ದರಾಮಯ್ಯ ಹೇಳಿಕೆಗೆ ಕಿಡಿ ಕಾರಿದ್ದಾರೆ.
ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವ ವಿಚಾರವನ್ನು ಸಮರ್ಥಿಸಿದ ಸಿದ್ದರಾಮಯ್ಯ ನಡೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ಆಹಾರ ಪದ್ಧತಿಗಳು, ನಮ್ಮ ನಡವಳಿಕೆಗಳು ದೊಡ್ಡಮಟ್ಟದಲ್ಲಿ ಪ್ರಚಾರಕ್ಕೆ, ಸಾರ್ವಜನಿಕವಾಗಿ ಚರ್ಚೆಗೆ ಅವಕಾಶ ಮಾಡಿಕೊಡಬಾರದು ಎಂದು ಸಲಹೆ ನೀಡಿದ್ದಾರೆ. ನಮ್ಮ ನಡವಳಿಕೆ ಮತ್ತು ಪದ್ಧತಿ ನಮಗೆ ಸೇರಿರೋದು. ಸಾರ್ವಜನಿಕವಾಗಿ ನಾನು ಆ ರೀತಿ, ಈ ರೀತಿ ಬದುಕಿದ್ದೇನೆ ಅನ್ನುವ ಮೂಲಕ ಸಂಘರ್ಷ ಉಂಟುಮಾಡಬಾರದು.
ಜನರ ಸಮಸ್ಯೆಗಳನ್ನು ಸರಿಪಡಿಸುವುದು ಯಾರಿಗೂ ಬೇಕಿಲ್ಲ. ಇಂಥ ವಿಚಾರಗಳ ಮೇಲೆಯೇ ಮುಂದಿನ ಚುನಾವಣೆಯಲ್ಲಿ ಮತ ಪಡೆಯಬೇಕು ಎನ್ನುವ ಇಚ್ಛೆ ಅವರಿಗೆಲ್ಲ ಇದೆ ಅಷ್ಟೆಎಂದು ಬೇಸರ ತೋಡಿಕೊಂಡರು. ಎರಡೂ ರಾಷ್ಟ್ರೀಯ ಪಕ್ಷಗಳು ಸಮಾಜದ ಸಾಮರಸ್ಯವನ್ನು ಹಾಳು ಮಾಡುವುದರಲ್ಲಿ ಪೈಪೋಟಿಗೆ ಬಿದ್ದಿವೆ. ಜನತೆಯೇ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಎಚ್.ಡಿ.ಕೆ ಪ್ರತಿಕ್ರಿಯಿಸಿದರು.
ಟಿಸಿ ಹಿಂಪಡೆದ ಮುಸ್ಲಿಂ ವಿದ್ಯಾರ್ಥಿನಿಯರು : ಮುಖ್ಯ ಕಾರಣ ಬಿ.ಸಿ ನಾಗೇಶ್ ಎಂದ ಗೌಸಿಯಾ
ಟಿಪ್ಪು ಸುಲ್ತಾನ್ ಗೆ ಹೆದರದ ಕೊಡಗಿನವರು ಇನ್ನು ಸಿದ್ದು ಸುಲ್ತಾನ್ ಗೆ ಹೆದರುತ್ತಾರಾ…?
ಯುಕೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಸುನಾಕ್ ಅವರೇ ಟಾಪ್ ಹುದ್ದೆಗೆ ಸೂಕ್ತ ಅಭ್ಯರ್ಥಿ: ಗೋವ್