Siddaramayya News updates:
ಕೊಡಗಿನಲ್ಲಿ ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ ಮಾಡಿರುವ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ. ಜನಪ್ರತಿನಿಧಿಗಳಿಗೆ ಭದ್ರತೆ ನೀಡುವುದು ಪೊಲೀಸ್ ಅಧಿಕಾರಿಗಳ ಜವಾಬ್ದಾರಿ. ಮೂರ್ನಾಲ್ಕು ಕಡೆ ಪ್ರತಿಭಟನೆ ಮಾಡುವುದು ಗೊತ್ತಿದ್ದರೂ ಅವರು ಸುಮ್ಮನಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿ ಜಿಲ್ಲೆಗೆ ಬಂದಿದ್ದರೆ ಪೊಲೀಸರು ಇದೇ ರೀತಿ ಸುಮ್ಮನಿರುತ್ತಿದ್ದರೇ? ನಾಲ್ಕು ಕಡೆ ಪ್ರತಿಭಟನಾಕಾರರನ್ನ ತಡೆಯಲು ಆಗಲಿಲ್ವಾ ಇವರಿಗೆ? ಕೊಡಗಿನ ಎಸ್ಪಿಗೆ ಯಾವ ರೋಗ ಬಂದಿತ್ತು ಎಂದು ಸಿಟ್ಟಿನಿಂದ ಪ್ರಶ್ನಿಸಿದರು. ಪೊಲೀಸರ ವೈಫಲ್ಯ ಖಂಡಿಸಿ ಆಗಸ್ಟ್ 26ರಂದು ಕೊಡಗಿನಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ. ನನ್ನ ನೇತೃತ್ವದಲ್ಲೇ ಎಸ್ಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ ಎಂದು ಹೇಳಿದರು.
ಸಿದ್ದು ವಿರುದ್ಧ ಕೊಡಗಿನಲ್ಲಿ ಭುಗಿಲೆದ್ದ ಆಕ್ರೋಶ: ಮೊಟ್ಟೆ ಒಡೆದು ಪ್ರತಿಭಟನೆ
ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗದಲ್ಲಿನ ಕಟ್ಟಡ ನಿರ್ಮಾಣ ವಸ್ತು ತೆರವುಗೊಳಿಸಿ – ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ