- Advertisement -
Banglore News:
ರಾಜ್ಯದಲ್ಲಿ ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಹಾಕಿದ 40% ಕಮಿಷನ್ ಆರೋಪದ ಹೊಸ ಬಾಂಬ್ ರಾಜ್ಯದಲ್ಲಿ ಇದೀಗ ಸಿಡಿದೆದ್ದಿದೆ. 40% ಕಮಿಷನ್ ಆರೋಪವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ನೀಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ಮಾತನಾಡಿದ ಅವರು, ಕೆಂಪಣ್ಣ ಮಾಡಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ನಾವು ನ್ಯಾಯಾಂಗ ತನಿಖೆ ನೀಡಲು ಒತ್ತಾಯ ಮಾಡ್ತೇವೆ ಎಂದರು. ಸರ್ಕಾರ ನ್ಯಾಯಾಂಗ ತನಿಖೆಗೆ ಮಾಡದಿದ್ದರೆ ಜನರ ಮುಂದೆ ಹೋಗ್ತೇವೆ. ಜನ ಯಾವ ತೀರ್ಪು ಬೇಕು ಕೊಡ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರ ವೈಫಲ್ಯ ಮರೆಮಾಚಲು ಜನೋತ್ಸವ ಬದಲಿಗೆ ಸಾರ್ವಕರ್ ಉತ್ಸವ – ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
- Advertisement -

