Friday, April 18, 2025

Latest Posts

“ನಾನು ಶ್ಯಾಡೋ ಸಿಎಂ” : ಮೊಟ್ಟೆ ಎಸೆತ ಪ್ರಕರಣಕ್ಕೆ ಗುಡುಗಿದ ಸಿದ್ದರಾಮಯ್ಯ

- Advertisement -

kodagu news:

ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣವಾಗಿ ರಾಜ್ಯದೆಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಈ ವಿಚಾರವಾಗಿ ಸಿದ್ದು ಫುಲ್ ಗರಂ ಆಗಿದ್ದಾರೆ. ಬೇರೆ ಸಚಿವರು ಬಂದಾಗ ಈ ರೀತಿ ದಾಳಿಯಾಗಿಲ್ಲ ಅಷ್ಟೇ ಯಾಕೆ ಟಿಪ್ಪು ಜಯಂತಿ ದಿನವೂ ನಾನು ಬಂದಾಗಲೂ ದಾಳಿಯಾಗಿಲ್ಲ ಈ ಬಾರಿ ಬಂದಾಗ ಮಾತ್ರ ದಾಳಿಯಾಗಿದೆ ಅಂದರೆ ಇದರ ಹಿಂದೆ ಬಿಜೆಪಿಯವರ ಕೈವಾಡವಿದೆ ಜೊತೆಗೆ ಅವರ ಜೊತೆ ಪೊಲೀಸ್ ನವರು ಶಾಮೀಲಾಗಿದ್ದಾರೆ.ಇದಕ್ಕೆ ಪ್ರತಿ ಉತ್ತರ ನೀಡುತ್ತೇವೆ. ನಿಮ್ಮ ಹಾಗೆ ನಮ್ಮ ಕಾರ್ಯಕರ್ತರು ಬೀದಿಗಿಳಿದರೆ ನಿಮಗೆ ಮನೆಯಿಂದ ಹೊರ ಬರುವುದೂ ಅಸಾಧ್ಯ ವಾಗಬಹುದು.ಮುಂದಿನ ಚುನಾವಣೆಯಲ್ಲಿ ನಿಮ್ಮ ಸೋಲು ನಿಶ್ಚಿತ ನಾನು ಶ್ಯಾಡೋ ಸಿಎಂ ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇವೆ, ಸಿದ್ದಾಂತವನ್ನು ಕಲ್ಲು-ಮೊಟ್ಟೆಗಳ ಮೂಲಕ ಎದುರಿಸುವುದು, ಸಮರ್ಥಿಸುವುದು ಹೇಡಿಗಳ ಲಕ್ಷಣ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಮೊಟ್ಟೆ ಎಸೆತಕ್ಕೆ ಸಿಡಿದೆದ್ದ ಸಿದ್ದು : ಕೊಡಗು ಎಸ್ ಪಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಿರ್ಧಾರ

ಇಂದು ಸಿದ್ಧರಾಮಯ್ಯ ಚಿಕ್ಕಮಗಳೂರು ಪ್ರವಾಸ : ಪೊಲೀಸ್ ಬಿಗಿ ಭದ್ರತೆ

ದೆಹಲಿ ಉಪಮುಖ್ಯಮಂತ್ರಿ ಮನೆ ಮೇಲೆ ಬೆಳ್ಳಂಬೆಳಗ್ಗೆ ಸಿಬಿಐ ದಾಳಿ

- Advertisement -

Latest Posts

Don't Miss