ಹುಬ್ಬಳ್ಳಿ : ಪವಾಡ ಪುರುಷ ಸಿದ್ಧಾರೂಢರ 94ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ತೆಪ್ಪೋತ್ಸವ (ಜಲ ರಥೋತ್ಸವ) ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಿದ್ಧಾರೂಢ ಮಠದ ಹೊಂಡದಲ್ಲಿ ವಿಜೃಂಭಣೆಯಿಂದ ಜರುಗಿತು. ಓಂ ನಮಃ ಶಿವಾಯ.., ಶಿವಾಯನಮಃ ಓಂ ಸಿದ್ಧಾರೂಢ ಸ್ವಾಮೀಜಿಗೆ ಜಯವಾಗಲಿ.. ಎಂಬ ಜಯಘೋಷಗಳು ಎಲ್ಲೆಡೆ ಮೊಳಗಿದವು.
ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿಯ ವತಿಯಿಂದ ನಡೆದ ತೆಪ್ಪೋತ್ಸವ ನೋಡಲು ಆಗಮಿಸಿದ್ದ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು, ಖರ್ಜುರ ಹಾಗೂ ಹೂವು ಹಾರಿಸಿ ಭಕ್ತಿ ಸಲ್ಲಿಸಿದರು.
ವಿಶೇಷ ಅಲಂಕೃತ ತೆಪ್ಪದ ರಥದಲ್ಲಿದ್ದ ಸಿದ್ಧಾರೂಢರ ಉತ್ಸವ ಮೂರ್ತಿಗೆ ಶ್ರೀಮಠದ ಮುಖ್ಯ ಆಡಳಿತ ಅಧಿಕಾರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಜಿ ಶಾಂತಿ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಮಠದ ಆಡಳಿತ ಮಂಡಳಿ ಹಾಗೂ ಭಕ್ತ ಸಮೂಹ ಸೇರಿದಂತೆ ಅನೇಕರು ಸಿದ್ಧಾರೂಢರಿಗೆ ಚಾಮರ ಸೇವೆ ಮಾಡಿದರು.
ಸಾಮಾನ್ಯ ಕಾನೂನು ಹಾಗೂ ಡ್ರಗ್ಸ್ ಕುರಿತು ಹುಬ್ಬಳ್ಳಿ – ಧಾರವಾಡ ಪೊಲೀಸರಿಂದ ಜಾಗೃತಿ
ಮಾಜಿ ಸಿಎಂ ಕುಮಾರಸ್ವಾಮಿ ಶೀಘ್ರ ಗುಣಮುಖರಾಗಲೆಂದು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ..
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ 4 ಸಂಘಟನೆಗಳು ಮನವಿ ಸಲ್ಲಿಸಿವೆ- ಈಶ್ವರ ಉಳ್ಳಾಗಡ್ಡಿ