ಮಲ್ಲೇಶ್ವರಂನಲ್ಲಿ ಸಿದ್ದಾರೂಢ ಶ್ರೀ ಕನಸು ನನಸು – ಎಂ.ಆರ್ ಸೀತಾರಾಮ್

ಅನ್ನದಾನ, ನೇತ್ರದಾನ, ರಕ್ತದಾನ, ವಿದ್ಯಾದಾನ, ಆಶ್ರಯದಾನ.. ಹೀಗೆ ಪಂಚವಿಧ ದಾಸೋಹ ತಾಣ ಈ ಸಿದ್ದಾಶ್ರಮ. ಇದೇ ಭಾನುವಾರ ಜನವರಿ 25ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಶ್ರೀ ಸಿದ್ದಾಶ್ರಮದಲ್ಲಿ ಇದೀಗ ನವೀಕರಣಗೊಂಡ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಅದ್ಧೂರಿ ಪೂಜಾ ಕೈಂಕರ್ಯ ನೆರವೇರಿತು. ಶ್ರೀಯಡಿಯೂರು ಕ್ಷೇತ್ರದ ಶ್ರೀರೇಣುಕಾ ಶಿವಾಚಾರ್ಯ ಮಹಾಸ್ವಾಮಿ ಹಾಗೂ ಹುಬ್ಬಳಿ ಶಾಂತಾಶ್ರಮದ ಸದ್ಗುರು ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾರ್ಗದರ್ಶನದಲ್ಲಿ ಹೋಮ ಹವನ ಸೇವೆಗಳು ನಡೆದವು.

ಸಿದ್ಧಾಶ್ರಮದ ಮೂಲ ರೂವಾರಿಗಳ ಮುಖ್ಯ ಅತಿಥಿಗಳಾಗಿ ಅಧ್ಯಕ್ಷರಾದ ಮಾಜಿ ಸಚಿವ ಎಂ.ಆರ್ ಸೀತಾರಾಮ್, ಶ್ರೀಮತಿ ಶ್ರುತಿ ಎಂ.ಆರ್ ಸೀತಾರಾಮ್, ಅನಸೂಯಮ್ಮ, ಶ್ರೀಮತಿ ಅದಿತಿ ಕೆ. ಮಂಜು, ಶ್ರೀ ಸುಂದರೇಶ್ ಸಿ.ವಿ, ಸಮರ್ಪಣ ಟ್ರಸ್ಟ್ ಹಾಗೂ ಶ್ರೀ ಭಕ್ತಿ ವಿನಾಯಕ ಸಂಘದ ಸದಸ್ಯರೂ ಸೇರಿ ಹಲವರು ಉಪಸ್ಥಿತರಿದ್ದರು.

ಮುಂಜಾನೆ 4 ಗಂಟೆಯಿಂದಲೇ ವಿನಾಯಕನಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಸಿದ್ದಾರೂಢ ಸ್ವಾಮಿ ಅವರ ಪ್ರತಿಮೆಗೆ ಪೂಜೆ, ಸದ್ಗುರು ಶ್ರೀ ಅಭಿನವ ಸಿದ್ಧಾರೂಢ ಶ್ರೀಗಳ ನೇತೃತ್ವದಲ್ಲಿ ಮಂತ್ರ ಪಠಣೆ ನಡೆಯಿತು. ಇದೇ ವೇಳೆಯೇ ಅಭಿನವ ಸಿದ್ದಾರೂಢ ಶ್ರೀಗಳು ಕಿರು ಪುಸ್ತಕ ಉದ್ಘಾಟಿಸಿದರು. ಜನ ಸೇವೆಯಲ್ಲೇ ಕೈಲಾಸ, ವೈಕುಂಠಗಳಿವೆ ಅನ್ನೋ ಮಾತನ್ನ ಹೇಳಿದ್ದ ಸಿದ್ದಾರೂಢ ಶ್ರೀಗಳು ಆ ಕಾಯಕ ಮಾಡುವವರ ಜೊತೆಯಲ್ಲೇ ನಿಲ್ಲುತ್ತಾರೆ ಅನ್ನೋದು ಭಕ್ತರ ನಂಬಿಕೆ ಆಗಿದೆ.

ಹಾಗಾಗಿಯೇ ಸತತ 23 ವರ್ಷಗಳಿಂದ ನೇತ್ರಾದಾನ, ಅನ್ನದಾನ, ವಿದ್ಯಾದಾನ, ಆಶ್ರಯದಾನವನ್ನೂ ಸಿದ್ಧಾಶ್ರಮದ ಅಧ್ಯಕ್ಷರಾದ ಎಂ.ಆರ್ ಸೀತಾರಾಮ್ ಮಾಡುತ್ತಾ ಬಂದಿದ್ದಾರೆ. ಇದೇ ವೇಳೆ ಶ್ರೀಗಳ ಗಣ್ಯರ ಸಮ್ಮುಖದಲ್ಲಿ ಈ ಟ್ರಸ್ಟ್​​ ನ ಹಲವು ಸೇವಾರ್ಥಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಸೀತಾರಾಮ್ ಅವರು ಮಹತ್ವದ ಸಂದೇಶ ನೀಡಿದ್ರು. ಗುರುಗಳ ಆಶೀರ್ವಾದ, ಹಿರಿಯರ ಕೃಪೆಯಿಂದಾಗಿ ಇದೆಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ.

ಸಿದ್ದಾರೂಢ ಶ್ರೀಗಳ ಶಿಷ್ಯರಾದ ಶ್ರೀ ರಾಮಚೈತನ್ಯ ಮಹಾಸ್ವಾಮಿಗಳು ಬೆಂಗಳೂರಿನಲ್ಲಿ ಒಂದು ಆಶ್ರಮ ಕಟ್ಟುವ ಸಂಕಲ್ಪ ಹೊಂದಿದ್ದರು. ಆ ಗುರುವಿನ ಕೃಪೆಯಿಂದಾಗಿಯೇ ಈ ಆಶ್ರಮ ನಿರ್ಮಿಸಲಾಗಿದೆ. ಈ ಕಾರ್ಯ ಮಾಡುತ್ತಿರುವುದಕ್ಕೆ ನಮಗೆ ಹೆಮ್ಮೆ ಹಾಗೂ ಖುಷಿ ಇದೆ. ಇನ್ನೂ ದೊಡ್ಡ ಮಟ್ಟದಲ್ಲಿ ಕಲ್ಯಾಣದ ಕೆಲಸಗಳನ್ನು ಮಾಡೋಣ, ನೀವೆಲ್ಲರೂ ಕೈ ಜೋಡಿಸಿ, ಸಾಕ್ಷಾತ್ ಸಿದ್ದಾರೂಢರ ಆಶೀರ್ವಾದ ನಮ್ಮ ಮೇಲೆ ಇರಲಿದೆ ಎಂದರು ಸೀತಾರಾಮ್.

ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ವಹಿಸಿದ ಟ್ರಸ್ಟ್ ಕಾರ್ಯದರ್ಶಿ ಕೃಷ್ಣ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ರು. ಒಳ್ಳೆಯ ಕಾರ್ಯಕ್ರಮ ನಡೆಯಿತು. ಶ್ರೀ ಅಭಿನವ ಸಿದ್ದಾರೂಢ ಸ್ವಾಮೀಜಿಗಳು ಈ ದಿನ ಆಗಮಿಸಿದ್ದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ದಾನ ಧರ್ಮದ ಕೆಲಸಗಳನ್ನು ನಮ್ಮ ಟ್ರಸ್ಟ್ ವತಿಯಿಂದ ಮಾಡುತ್ತೇವೆ ಎಂದರು. ಇದಕ್ಕೆಲ್ಲಾ ಶ್ರೀಗಳ ಆಶೀರ್ವಾದವಂತೂ ಇರಲೇಬೇಕು ಎಂದು ನೆನೆದರು.

About The Author