ಬಿಹಾರ ಚುನಾವಣೆಗೆ ಸಿದ್ದು ಟಾಂಗ್, ತೀರ್ಪಿಗೆ ಡಿಕೆಶಿ ಪ್ರತಿಕ್ರಿಯೆ!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA ಭರ್ಜರಿ ಮುನ್ನಡೆ ಸಾಧಿಸಿದ್ದು, ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್–ಆರ್‌ಜೆಡಿ ಮೈತ್ರಿಯ ಕಳಪೆ ಸಾಧನೆ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಹಾರದಲ್ಲಿಯೂ ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಹಾಘಟಬಂಧನ್ ಸೋಲಿಗೆ ನಿಖರ ಕಾರಣ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಹಿಂದೆಯೇ ಹರಿಯಾಣ ಮತ್ತು ಕರ್ನಾಟಕದಲ್ಲೂ ಇದೇ ರೀತಿಯ ಮತಕಳುವಿನ ಆರೋಪ ಮಾಡಿದ್ದನ್ನು ಸಿಎಂ ಸಿದ್ದರಾಮಯ್ಯ ನೆನಪಿಸಿದ್ದಾರೆ. ಮಹಾಘಟಬಂಧನ್‌ಗೆ ಹಿನ್ನಡೆಯಾದರೂ ಜನರ ತೀರ್ಪನ್ನು ಗೌರವಿಸಲು ನಾವು ಬದ್ಧರು ಎಂದು ಹೇಳಿದ್ದಾರೆ. ಎನ್‌ಡಿಎ ಬಹುಮತದತ್ತ ಸಾಗುತ್ತಿರುವುದು ಈಗ ಸ್ಪಷ್ಟವಾಗಿದೆ.

ಈ ನಡುವೆ, ಡಿಸಿಎಂ ಡಿಕೆ ಶಿವಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಬಿಹಾರದಲ್ಲಿ ಮತದಾರರು ತೀರ್ಪು ನೀಡಿದ್ದಾರೆ. ನಾವು ಅದಕ್ಕೆ ತಲೆಬಾಗುತ್ತೇವೆ ಎಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪೇ ಅಂತಿಮ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದು, ಬಿಹಾರದಲ್ಲಿ ಕಾಂಗ್ರೆಸ್ ಕೇವಲ ನಾಲ್ಕು ಸ್ಥಾನಗಳಲ್ಲಿ ಮಾತ್ರ ಮುನ್ನಡೆಯಲ್ಲಿರುವುದಾಗಿ ತಿಳಿಸಿದರು.

ವರದಿ : ಲಾವಣ್ಯ ಅನಿಗೋಳ

About The Author