Film News:
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸೈಮಾ ಅವಾರ್ಡ್ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಮೂಡಿ ಬಂತು. ಸೌತ್ ಸ್ಟಾರ್ಸ್ ಜೊತೆ ಬಾಲಿವುಡ್ ತಾರೆಯರು ಕಾರ್ಯಕ್ರಮಕ್ಕೆ ಮೆರಗು ತಂದಿದ್ರು. ಆದ್ರೆ ಅದೆಷ್ಟೋ ಸ್ಟಾರ್ ಗಳ ಮಧ್ಯೆ ಗಮನ ಸೆಳೆದ ಏಕೈಕ ಸ್ಟಾರ್ ಕನ್ನಡ ಸಿನಿ ರಂಗದ ಹೀರೊ. ಹೌದು ಸ್ವತಹ ಸೈಮಾ ಟ್ವೀಟ್ ಖಾತೆಯೆ ಈ ಬಗ್ಗೆ ಹೇಳಿಕೊಂಡಿದೆ. ಹಾಗಿದ್ರೆ ಸೈಮಾ ಹೇಳಿಕೊಂಡ ಆ ಸ್ಟಾರ್ ಐಕಾನ್ ಯಾರು ಗೊತ್ತಾ ..? ಹೇಳ್ತೀವಿ ಈ ಸ್ಟೋರಿಯಲ್ಲಿ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಮಾ 2022 ಪ್ರಶಸ್ತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಚಿತ್ರರಂಗದ ವಿವಿಧ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಈ ಕರ‍್ಯಕ್ರಮ ನಡೆಯುತ್ತಿದೆ. ಹಲವು ಸೆಲೆಬ್ರಿಟಿಗಳು ಈ ಕರ‍್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಕಳೆದ ರ‍್ಷ ನಿಧನ ಹೊಂದಿದ ಪುನೀತ್ ರಾಜ್ಕುಮಾರ್ ಅವರಿಗೆ ಇಂದಿನ ಕರ‍್ಯಕ್ರಮದಲ್ಲಿ ವಿಶೇಷ ಗೌರವ ಸಲ್ಲಿಕೆ ಮಾಡಲಾಗಿದೆ.
10ನೇ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷ. ದಕ್ಷಿಣ ಭಾರತದ ತಾರೆಯರ ಜೊತೆಗೆ ಬಾಲಿವುಡ್ ತಾರೆಯರು ಒಂದೇ ಅದ್ಧೂರಿ ವೇದಿಕೆಯಲ್ಲಿ ಕಾಣಿಸಿಕೊಂಡು ರಂಗೇರಿಸಿದ್ದಾರೆ.
ಕಮಲ್ ಹಾಸನ್, ರಣ್‌ವೀರ್ ಸಿಂಗ್, ದರ್ಶನ್, ಯಶ್, ಅಲ್ಲು ಅರ್ಜುನ್, ಶಿವರಾಜ್‌ಕುಮಾರ್ ಸೇರಿದಂತೆ ಸಾಕಷ್ಟು ಸೂಪರ್ ಸ್ಟಾರ್‌ಗಳು ಈವೆಂಟ್‌ನಲ್ಲಿ ಭಾಗಿಯಾಗಿದ್ದಾರೆ.
ವೇದಿಕೆ ಮುಂಭಾಗದಲ್ಲಿ ಯಶ್ ರಾಧಿಕಾ ಪಂಡಿತ್ ವೆಸ್ಟರ್ನ್ ಲುಕ್ ಗೆ ದೇಸಿ ಟಚ್ ನೀಡಿದ್ರೆ ಇತ್ತ ಕಮಲ ಹಾಸನ್ ಕೂಡಾ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ರು. ಇವರೆಲ್ಲರ ಮಧ್ಯೆ ಬಿಂಬಿತವಾದ ಸ್ಟಾರ್ ಅಂದ್ರೆ ಅದು ಒನ್ ಆಂಡ್ ಓನ್ಲಿ ಡಿ ಬಾಸ್ ದರ್ಶನ್ ಹೌದು ಇದರ ಬಗ್ಗೆ ಸ್ವತಃ ಸೈಮಾ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಹೌದು ಬ್ಲಾಕ್ ಆಂಡ್ ಬ್ಲಾಕ್ ನಲ್ಲಿ ಮಿಂಚಿದ್ದ ದರ್ಶನ್ ಫೋಟೋ ಹಂಚಿಕೊಂಡು ಈ ರೀತಿ ಬರೆದುಕೊಂಡಿದೆ.
Elegance personified at #SIIMA2022 by none other than @dasadarshan @Wolf777news@ConfidentGroup1@officialskyexch@HonerHomes@BharathiCements@GalaxyChocolate@Hindware_India@EaseMyTrip@CocaCola@ParleFamily@canarabank#10YearsofSIIMA #SIIMA2022 #SIIMA #NVYTv #HarmonyCity pic.twitter.com/Fnsh57VcoE
— SIIMA (@siima) September 14, 2022