ಆಂದ್ರಪ್ರದೇಶ : ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ಸಿಂಹಾಚಲಂ ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 100 ಕೋಟಿ ರೂ.ಗಳ ಹಣವನ್ನು ಚೆಕ್ ರೂಪದಲ್ಲಿ ದೇವರಿಗೆ ಅರ್ಪಿಸಿದ್ದಾನೆ. ಆದರೆ ಅವನ ಖಾತೆಯಲ್ಲಿರುವ ಹಣವನ್ನು ನೋಡಿದ ಬ್ಯಾಂಕ್ ಸಿಬ್ಬಂದಿಗಳಿಗೆ ಒಂದು ಕ್ಷಣ ಮಾತುಗಳು ನಿಂತೋಗಿದೆ.
ಬುದುವಾರ ದೇವಸ್ಥಾನದ ಸಿಬ್ಬಂದಿಗಳು ಹುಂಡಿಯ ಹಣ ಎಣಿಕೆ ಮಾಡುತ್ತಿದ್ದ ವೇಳೆ ಬೊಡ್ಡೆಪಲ್ಲಿ ರಾಧಾಕೃಷ್ಣ ಎಂಬುವವರ ಸಹಿ ಇದ್ದ ಕಾರ್ಪೋರೇಟ್ ಬ್ಯಾಂಕಿನ 100 ಕೋಟಿ ರೂಗಳ ಚೆಕ್ ಪತ್ತೆಯಾಗಿದೆ, ಇದನ್ನು ಕಂಡು ಆಶ್ಚರ್ಯರಾದ ಸಿಬ್ಬಂದಿಗಳು ಚೆಕ್ ಅನ್ನು ಆಡಳಿತಾಧಿಕಾರಿಗೆ ತೋರಿಸಿದ್ದಾರೆ.
ಬಳಿಕ ಅನುಮಾನಗೊಂಡ ದೇವಸ್ಥಾನದ ಸಿಬ್ಬಂದಿಗಳು ಸ್ಥಳೀಯ ಬ್ಯಾಂಕ್ ಶಾಖೆಯಲ್ಲಿ ವಿಚಾರಿಸಿದಾಗ ಚೆಕ್ ನೀಡಿದ್ದ ವ್ಯಕ್ತಿಯ ಬ್ಯಾಂಕ್ ನಲ್ಲಿರುವುದು ಕೇವಲ 17 ರೂ ಎಂಬುದು ಪತ್ತೆಯಾಗಿದೆ ಇನ್ನು ವ್ಯಕ್ತಿ ವಿಳಾಸ ತಿಳಿದು ಬಂದಿಲ್ಲ.
Savadatti: ಡೆತ್ ನೋಟ್ ಬೆರೆದಿಟ್ಟು ನದಿಗೆ ಹಾರಿ ಮಹಿಳೆ ಆತ್ಮಹತ್ಯೆ, ಏನಿದೆ ಕಾರಣ ಅದರಲ್ಲಿ.!
ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಅಚಾನಕ್ ಆಗಿ ಸಾವು: ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ..