ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಯನ್ನು ಸಂಪಾದಿಸಿಕೊಂಡಿರುವ ಜೋಡಿ ಜಿಸ್ಮಾ ಮತ್ತು ವಿಮಲ್ ಅವರು ತಮ್ಮ ಮದುವೆಯ ಕುರಿತು ಮೌಲ್ಯಮಯವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಅಂದರೆ ತುಂಬಾ ಪರ್ಸನಲ್ ಕ್ಷಣ. ಜನ ಸೇರಿದಷ್ಟು ದುಡ್ಡು ಬೇಕಾಗುತ್ತದೆ. ಯಾಕೆ ಇಷ್ಟು ಹಣ ಖರ್ಚು ಮಾಡಿ ಮದುವೆ ಮಾಡಬೇಕು ಅನ್ನಿಸಿತು ಎಂದು ಈ ಜೋಡಿ ಅಭಿಪ್ರಾಯ ವ್ಯಕ್ತಪಡಿಸಿದೆ.
ನಿರೂಪಕಿಯಾಗಿ ಪ್ರವೇಶಿಸಿದ್ದ ಜಿಸ್ಮಾ, ನಂತರ ಕಿರುಚಿತ್ರಗಳು ಹಾಗೂ ವೆಬ್‌ಸೀರೀಸ್‌ಗಳ ಮೂಲಕ ಗಮನ ಸೆಳೆದರು. ವಿಮಲ್ ಜೊತೆಗಿನ ಸೃಜನಾತ್ಮಕ ವಿಡಿಯೋಗಳ ಮೂಲಕ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಜಿಸ್ಮಾ ಅಂಡ್ ವಿಮಲ್ ಹೆಸರಿನಲ್ಲಿ ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ ಕೂಡ ಅತ್ಯಂತ ಯಶಸ್ವಿಯಾಗಿದೆ. ಜಿಸ್ಮಾ ಈಗಾಗಲೇ ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಮ್ಮದು ಅಂತರ್ಜಾತಿ ವಿವಾಹ. ಬೇರೆ ಬೇರೆ ಕುಟುಂಬಗಳು ಒಂದಾಗುವ ಈ ಸಂದರ್ಭವನ್ನು ನಿಜವಾದ ಅರ್ಥದಲ್ಲಿ ವಿಶೇಷವಾಗಿಸಲು, ಕೇವಲ ಆಪ್ತ ಬಂಧುಗಳ ಹಾಗೂ ಹತ್ತಿರದ ಸ್ನೇಹಿತರ ಸಾನ್ನಿಧ್ಯದಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದೆವು. ಮಾಧ್ಯಮವನ್ನು ಅತೀ ಹೆಚ್ಚು ಸೇರಿಸಿಕೊಂಡಿದ್ದರೆ, ಮನೆಮಂದಿಗೆ ಮುಜುಗರ ಆಗಬಹುದೆಂಬ ಭಯವಿತ್ತು.
ಅವರಿಗಂತು ನಮ್ಮಂಥ ದೃಷ್ಟಿಕೋಣವಿಲ್ಲ. ಕುಟುಂಬದವರು ಪರಸ್ಪರ ಬೆರೆಯಬೇಕಾದ ಸಮಯದಲ್ಲಿ ಕ್ಯಾಮೆರಾ ಮತ್ತು ಶಬ್ದಗಳು ಅಡ್ಡಿಯಾಗಬಹುದು ಅನ್ನಿಸಿತು ಎಂದಿದ್ದಾರೆ. ಮದುವೆಯ ದಿನ ನಮ್ಮನ್ನು ಮನದಿಂದ ಹಾರೈಸುವ ಜನ ಇದ್ದರೆ ಸಾಕು ಎಂದು ನಾವಿಬ್ಬರೂ ತೀರ್ಮಾನಿಸಿದ್ದೆವು. ಯೂಟ್ಯೂಬ್‌ದಿಂದ ಬಂದ ಆದಾಯದಿಂದಲೇ ಸ್ವಲ್ಪ ಉಳಿತಾಯ ಮಾಡಿಕೊಂಡಿದ್ದೆವು.
ಮನೆಯವರ ಬಳಿ ಹೆಚ್ಚಿನ ಹಣ ಉಳಿದಿರಲಿಲ್ಲ. ಆದ್ದರಿಂದ ಖರ್ಚನ್ನು ನಾವು ಹೊರತಾಗಿಸಿದ್ದೆವು ಎಂದು ಜಿಸ್ಮಾ ಮತ್ತು ವಿಮಲ್ ಹೇಳಿದರು. ಮೈಲ್‌ಸ್ಟೋನ್ ಮೇಕರ್ಸ್‌ಗೆ ನೀಡಿದ ಈ ಸಂದರ್ಶನ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇವರ ಈ ನಿಷ್ಠೆಯ ಹಾಗೂ ಬದುಕಿನೊಡನೆ ಹೊಂದಾಣಿಕೆ ಮಾಡಿಕೊಂಡ ಸಾದಾ ಜೀವನ ಶೈಲಿ ಅನೇಕರಿಗು ಪ್ರೇರಣೆಯಾಗುತ್ತಿದೆ.
ವರದಿ : ಲಾವಣ್ಯ ಅನಿಗೋಳ

