ಮಾದೇವ ಮಾದೇವ ಎನ್ನುತ್ತಾ ಸೋಜುಗಾದ ಸೂಜು ಮಲ್ಲಿಗೆ ಹಾಡು ಹಾಡಿ ಇಡೀ ಕರುನಾಡಿನ ತುಂಬೆಲ್ಲಾ ಮನೆ ಮಾತಾದ ಗಾಯಕಿ ಅನನ್ಯ ಭಟ್. ಸಂಗೀತ ಪ್ರಿಯರಿಗೆ ತಮ್ಮ ಮುದ್ದಾದ ಧ್ವನಿ ಮೂಲಕ ಬೇರೆದೊಂದು ಲೋಕಕ್ಕೆ ಕರೆದೊಯ್ಯುವ ಗಾಯಕಿ ಅನನ್ಯ ಈಗ ನಾಯಕಿ.

ಹೌದು, ಬಹುಬೇಡಿಕೆ ಗಾಯಕಿಯಾಗಿರುವ ಅನನ್ಯ ಭಟ್ ಇದೀಗ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗ್ತಿದ್ದಾರೆ. ನೈಜ ಘಟನೆಯಾಧಾರಿತ ಸೇನಾಪುರ ಸಿನಿಮಾದಲ್ಲಿ ನಟಿಸುವ ಮೂಲಕ ನಾಯಕಿಯಾಗಿ ಕನ್ನಡ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಿದ್ದಾರೆ ಎರಡು ದಶಕಗಳ ಹಿಂದೆ ಕುಂದಾಪುರ, ಬೈಂದೂರು, ಭಟ್ಕಳಗಳಲ್ಲಿ ನಡೆದ ನಿಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡ ಗುರು ಸವನ್ ಎಂಬುವರು ಸಿನಿಮಾ ನಿರ್ದೇಶಿಸುತ್ತಿದ್ದು, ಅಮಿತ್ ಕುಮಾರ್, ರಾಹುಲ್ ದೇವ್ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನೂ ಉಳಿದಂತೆ ಅನನ್ಯಾ ಭಟ್, ಗಿರಿರಾಜ್ , ದಿನೇಶ್ ಮಂಗಳೂರು ಸೇರಿ ಕೆಲವು ಪ್ರಮುಖ ನಟರು ಸೇನಾಪುರ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಹಿಂದೆ ಹಲವಾರ ಸಿನಿಮಾ ಆಫರ್ ಗಳು ಅನನ್ಯ ಭಟ್ ಅರಸಿ ಬಂದಿದ್ದು, ಆದ್ರೆ ಯಾವುದೇ ಕಥೆ ಇಷ್ಟವಾಗಿರಲಿಲ್ಲವಂತೆ. ಹೀಗಾಗಿ ಅನನ್ಯ ಸೇನಾಪುರ ಕಥೆ ಹೇಳಿ ಇಷ್ಟಪಟ್ಟು ಸಿನಿಮಾ ಮಾಡ್ತಿದ್ದಾರಂತೆ.




