ಸೌಜನ್ಯ ಕೇಸ್‌ಗೆ SIT ಎಂಟ್ರಿ? ಕ್ಲೀನ್‌ಚಿಟ್ ಪಡೆದವ್ರಿಗೆ ಶಾಕ್!

ಧರ್ಮಸ್ಥಳ ಪ್ರಕರಣದ ತನಿಖೆಗೆ ಇವತ್ತು ಬಹಳ ದೊಡ್ಡ ತಿರುವು ಸಿಕ್ಕಿದೆ. SIT ತನಿಖೆಯ ಮಧ್ಯೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಮತ್ತೆ ಚರ್ಚೆಗೆ ಒಳಪಟ್ಟಿದೆ. ಈ ಸಂಬಂಧ ಸೌಜನ್ಯ ಪ್ರಕರಣದಲ್ಲಿ ಹಿಂದಿನ ತನಿಖೆಗಳಲ್ಲಿ ಕ್ಲೀನ್‌ಚಿಟ್‌ ಪಡೆದಿದ್ದವರನ್ನು ವಿಶೇಷ ತನಿಖಾ ತಂಡ ಪುನಃ ವಿಚಾರಣೆಗೆ ಕರೆಯಲಾಗಿದೆ.

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣವನ್ನು ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ಸಂದರ್ಭದಲ್ಲಿ, ಹಿಂದಿನ ಸೌಜನ್ಯ ಪ್ರಕರಣದ ಆರೋಪಿಗಳಾದ ಉದಯ್ ಕುಮಾರ್ ಜೈನ್, ಧೀರಜ್ ಕೆಲ್ಲಾ ಹಾಗೂ ಮಲ್ಲಿಕ್ ಜೈನ್ ಅವರಿಗೆ ನೋಟಿಸ್ ನೀಡಿದೆ. ಈಗಾಗಲೇ ಉದಯ್ ಕುಮಾರ್ ಜೈನ್ ಬೆಳ್ತಂಗಡಿ ಎಸ್ ಐಟಿ ಕಚೇರಿಗೆ ಹಾಜರಾಗಿದ್ದಾರೆ.

ಸೌಜನ್ಯದ ತಾಯಿ ಎಸ್‌ಐಟಿಗೆ ನೀಡಿದ ದೂರಿನ ಆಧಾರದಲ್ಲಿ ಅಥವಾ ಚಿನ್ನಯ್ಯನ ಹೇಳಿಕೆಯ ಹಿನ್ನೆಲೆಯಲ್ಲಿ ನನ್ನನ್ನು ಎಸ್‌ಐಟಿ ಕರೆದಿರಬಹುದು. ನಾನು ಯಾವುದೇ ತನಿಖೆಗೂ ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇದು ಧರ್ಮಸ್ಥಳದ ಶವ ಹೂತಿರುವಿಕೆ ಪ್ರಕರಣದ ದಿಕ್ಕು ತಪ್ಪಿಸಲು ನಡೆದಿರುವ ನಾಟಕ. ಯಾರೋ ವ್ಯಕ್ತಿ ವಿಡಿಯೋವೊಂದರಲ್ಲಿ, ಸೌಜನ್ಯ ಕೊಲೆಯಾದ ಸಮಯದಲ್ಲಿ ನಾನು ಅಲ್ಲಿ ಇರಲಿಲ್ಲ ಎಂದಿದ್ದಾನೆ. ಮತ್ತೊಂದು ವಿಡಿಯೋದಲ್ಲಿ, ನಾನು ಆಕೆಯನ್ನು ಹೊತ್ತುಕೊಂಡು ಹೋಗುವದನ್ನು ನೋಡಿದ್ದೇನೆ ಎಂದು ಹೇಳಿದ್ದಾನೆ. ಸಿನಿಮೀಯ ರೀತಿಯಲ್ಲಿ ಕಥೆ ಕಟ್ಟಲಾಗಿದೆ. ಈಗ ಮತ್ತೆ ನನ್ನ ಮೇಲೆ ಆರೋಪ ಹೊರಡುತ್ತಿದ್ದಾರೆ.

CID ಮತ್ತು CBI ತನಿಖೆಗಳಲ್ಲಿಯೂ ಕ್ಲೀನ್‌ಚಿಟ್‌ ಪಡೆದಿರುವುದನ್ನು ಜೈನ್ ಉಲ್ಲೇಖಿಸಿದ್ದಾರೆ. ಬ್ರೈನ್ ಮ್ಯಾಪಿಂಗ್ ಸಹ ನಡೆದಿದೆ. ಎಲ್ಲ ತನಿಖೆಗಳಿಗೆ ಸಹಕರಿಸಿದ್ದೇನೆ. ಆಗ ಕೋರ್ಟ್ ಹೇಳಿತ್ತು, ಆಯ್ತು ಅರ್ಜಿ ಹಾಕಿ ಅಂದಿತ್ತು. ಬಳಿಕ ನಾರ್ಕೊ ಅನಾಲಿಸಿಸ್ಟ್ ಟೆಸ್ಟ್ ಕೂಡ ಮಾಡಲಾಗಿತ್ತು. ಆದರೆ ಈಗ ಮತ್ತೆ ವಿಚಾರಣೆಗಾಗಿ ಕರೆದು ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.

ಲೋಕಲ್‌ ಪೊಲೀಸ್‌ ತನಿಖೆ ವೇಳೆ ಎಫ್‌ಐಆರ್‌ನಲ್ಲಿ ನನ್ನ ಹೆಸರೇ ಇರಲಿಲ್ಲ. ಗೌರ್ಮೆಂಟ್‌ ವಕೀಲನನ್ನ ಕ್ಯಾಚ್‌ ಮಾಡಿ ಕುತಂತ್ರ ನಡೆಸಿದ್ರು. ಸೌಜನ್ಯನ ತಾಯಿ ಈಗ ಆರಾಮವಾಗಿ ದೊಡ್ಡ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸೌಜನ್ಯ ಮನೆಯಲ್ಲಿ ಇಡಿ ದಾಳಿ ಆಗಬೇಕೆಂದು ಒತ್ತಾಯಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ