ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು, ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಬುರುಡೆ ಗ್ಯಾಂಗಿನ ಜನ್ಮ ಜಾಲಾಡ್ತಿದ್ದು, ಸುದೀರ್ಘ ವಿಚಾರಣೆಗೆ ಮುಂದಾಗಿದ್ದಾರೆ. ಮಾಸ್ಕ್‌ಮ್ಯಾನ್ ಚಿನ್ನಯ್ಯ ಬಹಳ ಸ್ಪಷ್ಟವಾಗಿ ಕೆಲವರ ಹೆಸರುಗಳನ್ನು ಹೇಳಿದ್ದಾನೆ. ಮಟ್ಟಣ್ಣವರ್, ತಿಮರೋಡಿ, ಜಯಂತ್, ಸಮೀರ್, ವಿಠಲ ಗೌಡ, ಪ್ರದೀಪ್ ಗೌಡ ಸೇರಿದಂತೆ, ಹಲವು ಯೂಟ್ಯೂಬರ್‌ಗಳ ಹೆಸರನ್ನೂ ಬಾಯ್ಬಿಟ್ಟಿದ್ದಾನೆ.
ಪ್ರತಿಯೊಬ್ಬರಿಗೂ ಬುಲಾವ್ ಕೊಟ್ಟಿದ್ದು, ತನಿಖೆಯನ್ನು ತೀವ್ರಗೊಳಿಸಿದೆ. ಯೂಟ್ಯೂಬರ್‌ಗಳು ಕೇವಲ ವಿವ್ಯೂ, ಲೈಕ್‌ಗಳಿಗಷ್ಟೇ ವಿಡಿಯೋ ಮಾಡಿದ್ರಾ? ಅಥವಾ ಷಡ್ಯಂತ್ರದ ಭಾಗವಾಗಿದ್ರಾ ಅನ್ನೋ ಬಗ್ಗೆ, ತನಿಖೆ ಮಾಡ್ತಿದ್ದಾರೆ. ಸೆಪ್ಟೆಂಬರ್ 7ರಂದು ಭಾನುವಾರ ಹಿನ್ನೆಲೆ, ಒಂದು ದಿನದ ಮಟ್ಟಿಗೆ ವಿಚಾರಣೆಗೆ ನಿಲ್ಲಿಸಲಾಗಿತ್ತು. ಸೆಪ್ಟೆಂಬರ್ 8ರಿಂದ ಮತ್ತೆ ವಿಚಾರಣೆ ಶುರುವಾಗಿದೆ. ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಬರುವಂತೆ ಬುಲಾವ್ ನೀಡಲಾಗಿದೆ.
ಎಲ್ಲರನ್ನೂ ಮುಖಾಮುಖಿ ಕೂರಿಸಿ, ಅಧಿಕಾರಿಗಳು ವಿಚಾರಣೆ ಮಾಡಲು ಪ್ಲಾನ್ ಮಾಡಿದ್ದಾರೆ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮುಖಂತಿ ಕೂಡ ಹಾಜರು ಇರಲಿದ್ದಾರೆ. ಬುರುಡೆ ತಾನೇ ತಂದಿದ್ದಾಗಿ ಸೌಜನ್ಯ ಮಾವ ವಿಠಲ್ ಗೌಡ ಒಪ್ಪಿಕೊಂಡಿದ್ದಾರಂತೆ. ಬಂಗ್ಲಗುಡ್ಡದಲ್ಲಿ ಹಲವು ಅಸ್ಥಿಪಂಜರಗಳನ್ನು ನೋಡಿದ್ದಾಗಿ ಹೇಳಿದ್ದಾರೆ. ಹೀಗಾಗಿ ಸೋಮವಾರ ಕೂಡ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ. ಇನ್ನು, ಕೇರಳ ಯೂಟ್ಯೂಬರ್ ಮುನಾಫ್‌ಗೂ ಎಸ್‌ಐಟಿ ಬುಲಾವ್ ಕೊಟ್ಟಿದ್ದು, ಇಂದೇ ವಿಚಾರಣೆ ನಡೆಯುವ ಸಾಧ್ಯತೆ ಇದೆ.