Tuesday, September 23, 2025

Latest Posts

ಮಾಸ್ಕ್‌ಮ್ಯಾನ್‌ ಚಿನ್ನಯ್ಯನಿಗೆ ಹಣ ಕೊಟ್ಟಿದ್ಯಾರು?

- Advertisement -

ಧರ್ಮಸ್ಥಳ ಪ್ರಕರಣದ ತನಿಖೆ ಚುರುಕು ಪಡೆದಿದ್ದು, ಎಸ್‌ಐಟಿ ಅಧಿಕಾರಿಗಳು ಫಂಡಿಂಗ್‌ ಮಾಡ್ತಿದ್ದವರ ಬೆನ್ನು ಹತ್ತಿದ್ದಾರೆ. ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಹಾಗೂ ಪತ್ನಿಯ ಅಕೌಂಟ್‌ಗೆ ಹಣ ವರ್ಗಾವಣೆಯಾಗಿರುವ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದೆ. ಪತ್ನಿ ಸೇರಿದಂತೆ ಚಿನ್ನಯ್ಯನ ಕುಟುಂಬದ ಪ್ರತಿಯೊಬ್ಬರ ಖಾತೆಗಳನ್ನೂ ಪರಿಶೀಲನೆ ಮಾಡಲಾಗ್ತಿದೆ. ಈಗಾಗಲೇ ಅಕೌಂಟ್‌ ಡೀಟೆಲ್ಸ್‌ ಪಡೆಯಲಾಗಿದೆ.

ಇನ್ನು, ಫಂಡಿಂಗ್‌ ಆರೋಪದ ಮೇಲೆ ಮಹೇಶ್‌ ಶೆಟ್ಟಿ ತಿಮರೋಡಿಯ 11 ಬೆಂಬಲಿಗರಿಗೆ ನೋಟಿಸ್ ನೀಡಲಾಗಿದೆ. ಈಗಾಗಲೇ 6 ಜನರನ್ನು ವಿಚಾರಣೆ ನಡೆಸಲಾಗಿದೆ. 6 ತಿಂಗಳ ಹಿಂದೆ ಹಣ ವರ್ಗಾವಣೆ ಮಾಡಲಾಗಿದೆ ಎನ್ನಲಾಗ್ತಿದ್ದು, ಈ ಬಗ್ಗೆ ದಾಖಲೆಗಳನ್ನು ಪಡೆಯಲಾಗಿದೆ. ಮತ್ತಷ್ಟು ಮಂದಿ ಫಂಡಿಂಗ್‌ ಮಾಡಿರುವ ಬಗ್ಗೆ ಮಾಹಿತಿ ಇದ್ದು, ಸಂಬಂಧಪಟ್ಟ ಎಲ್ಲರಿಗೂ ನೋಟಿಸ್‌ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

ಚಿನ್ನಯ್ಯ, ಪತ್ನಿ ಮಲ್ಲಿಕಾ ಖಾತೆಗೆ ಹಣ ವರ್ಗಾವಣೆ ಮಾಡಿರುವ ಅನುಮಾನ ಇದ್ದು, ತಿಮರೋಡಿ ಆಪ್ತ ಗಣೇಶ್‌ ಶೆಟ್ಟಿಯ ವಿಚಾರಣೆ ನಡೆಸಲಾಗ್ತಿದೆ. ದೊಡ್ಡ ಮಟ್ಟದ ಹಣ ವರ್ಗಾವಣೆ ಆಗಿದೆ ಎನ್ನಲಾಗ್ತಿದೆ. ಇನ್ನು, ತಿಮರೋಡಿ ಕೀಪ್ಯಾಡ್‌ ಮೊಬೈಲ್ಸ್‌ ಮಾತ್ರ ಬಳಸುತ್ತಿದ್ರು. ಆದ್ರೆ, ಇವರಿಗೆ 4 ಮೊಬೈಲ್‌ಗಳನ್ನು, ಗಣೇಶ್‌ ಶೆಟ್ಟಿಯೇ ಬಳಸ್ತಿದ್ದ. ಹಲವರ ಜೊತೆಗಿನ ಮಾತುಕತೆಗೆ ಇವೇ ಮೊಬೈಲ್ಸ್‌ ಬಳಸ್ತಿದ್ದ. ಇದಕ್ಕಾಗಿಯೇ ಪ್ರತ್ಯೇಕ ಸಿಮ್‌ಗಳನ್ನು ಇಟ್ಟುಕೊಂಡಿದ್ದ.

ತಿಮರೋಡಿಗೆ ಸೇರಿದ ಮೊಬೈಲ್‌ನಂದಲೇ ಹಣ ವರ್ಗಾವಣೆ ಅನುಮಾನ ಮೂಡಿದೆ. ಹೀಗಾಗಿ ಗೂಗಲ್‌ ಪೇ ಮೂಲಕ ಹಣ ವರ್ಗಾವಣೆ, ತಿಮರೋಡಿ ಮನೆಗೆ ಚಿನ್ನಯ್ಯನ ಎಂಟ್ರಿ, ಹೇಗೆ, ಯಾರಿಂದ, ಯಾವಾಗ ಪರಿಚಯ ಆಯ್ತು. ತಿಮರೋಡಿ ಯಾರ ಜೊತೆ ಸಂಪರ್ಕದಲ್ಲಿದ್ರು ಅನ್ನೋ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗ್ತಿದೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬೆಂಗಳೂರಿನಲ್ಲಿ ಇಂದು ಗೃಹ ಸಚಿವ ಪರಮೇಶ್ವರ್‌ ನೇತೃತ್ವದಲ್ಲಿ, ಮಹತ್ವದ ಸಭೆ ನಡೆಯಲಿದೆ. ಎಸ್‌ಐಟಿ ಅಧಿಕಾರಿಗಳು ಭಾಗಿಯಾಗ್ತಿದ್ದು, ತನಿಖೆಗೆ ತಾರ್ಕಿಕ ಅಂತ್ಯ ನೀಡುವ ಬಗ್ಗೆ ಚರ್ಚೆ ಸಾಧ್ಯತೆ ಇದೆ.

- Advertisement -

Latest Posts

Don't Miss