Beauty tips:
ತ್ವಚೆಯ ರಕ್ಷಣೆ ಅತ್ಯಂತ ಕಷ್ಟದ ಕೆಲಸವಾಗಿದೆ ಮುಖದಲ್ಲಿ ಆಗಾಗ ಚಿಕ್ಕ ಚಿಕ್ಕ ಕಪ್ಪು ಚುಕ್ಕೆಗಳು ಹೆಚ್ಚಾಗಿ ಆಗುತ್ತಿರುತ್ತದೆ, ನೀವು ಆರಂಭದಲ್ಲೇ ಇದರ ಕಾಳಜಿ ತೆಗೆದು ಕೊಂಡರೆ ನಿಮ್ಮ ತ್ವಚೆಯ ರಕ್ಷಣೆ ಮಾಡಬಹುದು ಇಲ್ಲವಾದರೆ ಅವು ಮುಖದಮೇಲೆ ಶಾಶ್ವತ ಕಲೆಗಳಾಗಿ ಉಳಿದು ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮುಖದ ಆರೋಗ್ಯ ಕಾಪಾಡಿಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಲು ಕೆಲವು ಸರಳ ಉಪಾಯಗಳು ತಿಳಿದು ಕೊಳ್ಳೋಣ.
ಇದು ಸಾಮಾನ್ಯ ತ್ವಚೆಗಾಗಿ ಬಳಸಲಾಗುವ ಫೇಸ್ ಪ್ಯಾಕ್ ಆಗಿರುತ್ತದೆ, ಇದಕ್ಕೆ ಬೇಕಾಗುವ ಸಾಮಗ್ರಿಗಳು…!
1.ಎರಡು ಸ್ಪೂನ್, ಗಂಧದ ಪುಡಿ ,ಒಂದು ಸ್ಪೂನ್ ಕಡಲೆ ಹಿಟ್ಟು ,ಒಂದು ಸ್ಪೂನ್ ಅರಿಶಿನವನ್ನು ಬೆರೆಸಿಕೊಳ್ಳಿ ಜೊತೆಗೆ ಸ್ವಲ್ಪ ರೋಜ್ ವಾಟರ್ ಚುಮುಕಿಸಿ ,ಇದನ್ನೆಲ್ಲವನ್ನು ಸೇರಿಸಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ ಈ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಲೇಪಿಸಿ ,ಹತ್ತು ನಿಮಿಷ ಬಿಟ್ಟು ನಿಮ್ಮ ಮುಖವನ್ನು ತೊಳಿಯಿರಿ, ಇದರಿಂದ ನಿಮ್ಮ ಮುಖ ಹಾಲಿನಂತೆ ಕಂಗೊಳಿಸುತ್ತದೆ. ಒಣ ತ್ವಚೆ ಯವರು ಈ ಫೇಸ್ ಪ್ಯಾಕ್ ಅನ್ನು ಬಳಸಬೇಕು.
2.ನಾಲಕ್ಕು ಸ್ಪೂನ್ ಹಾಲಿನ ಜೊತೆಗೆ ಎರಡು ಸ್ಪೂನ್ ರೋಜ್ ವಾಟರ್ ಅನ್ನು ಬೆರೆಸಿಕೊಂಡು ಇದನ್ನು ಇಡೀ ನಿಮ್ಮ ಶರೀರಕ್ಕೆ ಹಚ್ಚಿಕೊಳ್ಳಿ ನಂತರ ಸ್ನಾನ ಮಾಡಿ.
3.ಒಂದು ಸ್ಪೂನ್ ಕೇಸರಿಯನ್ನು ಒಂದು ಸ್ಪೂನ್ ಜೇನುತುಪ್ಪ ಮತ್ತು ಒಂದು ಸ್ಪೂನ್ ಹಾಲಿನ ಕೆನೆಯನ್ನು ಮಿಶ್ರಣ ಮಾಡಿ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 30ನಿಮಿಷಗಳ ಕಾಲ ಹಾಗೆ ಬಿಡಿ ,ನಂತರ ತಣ್ಣನೆ ನೀರಿನಿಂದ ತೊಳೆಯಿರಿ ಇದು ನಿಮ್ಮ ಮುಖಕ್ಕೆ ಅತ್ಯುತ್ತಮ ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತದೆ, ಇದರಿಂದ ನಿಮ್ಮ ತ್ವಚೆ ಸುಂದರವಾಗಿ ಕಾಣುತ್ತದೆ. ಈ ಫೇಸ್ ಪ್ಯಾಕ್ ನಿಮ್ಮ ಚರ್ಮ ಯವ್ವನವಾಗಿರುವುದಕ್ಕೆ ಕಾರಣವಾಗುತ್ತದೆ, ಮೊಡವೆಗಳು ನಿಮ್ಮ ತ್ವಚೆಯನ್ನು ಕಾಡದಂತೆ ನೋಡಿಕೊಳ್ಳುತ್ತದೆ.
4.ಒಂದು ಸ್ಪೊನ್ ಹಾಲಿನ ಕೆನೆಯ ಜೊತೆಗೆ ಒಂದು ಸ್ಪೂನ್ ಓಟ್ಸ್ ಮತ್ತು ಒಂದು ಸ್ಪೂನ್ ರೋಜ್ ವಾಟರ್ ಅನ್ನು ಮಿಕ್ಸ್ ಮಾಡಿ ಹಾಗೂ ಇದನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ ಮತ್ತು ವೃತ್ತಾಕಾರವಾಗಿ 5ನಿಮಿಷಗಳಕಾಲ ಮಸಾಜ್ ಮಾಡಿ 15ನಿಮಿಷ ಬಿಟ್ಟು ತೊಳೆಯಿರಿ. ಹೀಗೆಮಾಡಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.