ಮುದ್ದು ಮುದ್ದಾಗಿರೋ ಸಾಕು ಪ್ರಾಣಿಗಳಲ್ಲಿ ನಾಯಿ ಕೂಡಾ ಒಂದು. ನಿಯತ್ತಿಗೆ ಹೆಸರುವಾಸಿಯಾಗಿರುವ ನಾಯಿ, ತನ್ನನ್ನು ಸಾಕಿರುವವರ ಜೊತೆ ತನ್ನ ಕೊನೆಯುಸಿರಿರುವವರೆಗೂ ನಿಯತ್ತಾಗಿರುತ್ತದೆ. ನಾಯಿಗಳಲ್ಲಿ ಹಲವಾರು ತಳಿಗಳಿದೆ. ಅಂಥ ನಾಯಿಗಳಲ್ಲಿ ನಾವಿವತ್ತು ಜಗತ್ತಿನ ಚಿಕ್ಕ ನಾಯಿಗಳು ಯಾವುದು..? ಅವುಗಳ ವಿಶೇಷತೆಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ.
ಪೊಮರೇನಿಯನ್: ಜಗತ್ತಿನ ಪುಟ್ಟದಾದ, ಮುದ್ದಾದ ನಾಯಿಗಳಲ್ಲಿ ಒಂದು ಈ ಪೊಮರೇನಿಯನ್ ಪೆಟ್. 20 ಸೆಂ.ಮೀಟರ್ ಉದ್ದದ, ಮೂರು ಕೆಜಿಯುಳ್ಳ ಈ ನಾಯಿ ನೋಡಲು ಸಖತ್ ಕ್ಯೂಟ್ ಆಗಿರುತ್ತದೆ. ಈ ನಾಯಿಗಳ ಇನ್ನೊಂದು ವಿಶೇಷತೆ ಅಂದ್ರೆ ಇದು 18 ವಿವಿಧ ಬಣ್ಣಗಳನ್ನು ಹೊಂದಿರುತ್ತದೆ. ವಿದೇಶದಲ್ಲಿ ಈ ನಾಯಿಯನ್ನ ಹೆಚ್ಚು ಸಾಕಲಾಗತ್ತೆ. ಭಾರತದಲ್ಲಿ ಈ ನಾಯಿಗೆ ಹೆಚ್ಚು ಬೆಲೆಯಿದೆ. ಇಲ್ಲಿ ಕೆಲವರಷ್ಟೇ ಪೊಮರೇನಿಯನ್ ಪೆಟ್ ಸಾಕುತ್ತಾರೆ.
ಫ್ರೆಂಚ್ ಬುಲ್‌ಡಾಗ್: 12 ಇಂಚು ಉದ್ದ, ಮತ್ತು 28 ಪೌಂಡ್ ತೂಕವಿರುವ ಈ ನಾಯಿ ನೋಡಲು ಅಷ್ಟೇನೂ ಕ್ಯೂಟ್ ಇರಲ್ಲ. ಆದ್ರೆ ಇದರ ಮುಗ್ಧತೆ ನೋಡಿದ್ರೆ, ಖಂಡಿತವಾಗಿಯೂ ಇದನ್ನ ಅಪ್ಪಿ ಮುದ್ದಾಡಬೇಕು ಅನ್ನಿಸುತ್ತೆ.
ಟಶ್ಚನ್ ಡಾಗ್: ಇದು ಪ್ರಪಂಚದ ಕುಬ್ಜ ನಾಯಿ. ಫ್ರೆಂಡ್ಲಿ ನೇಚರ್ ಹೊಂದಿರುವ ಈ ನಾಯಿ, ಪಾಲಕರೊಂದಿಗೆ ಚೆಂದವಾಗಿ ಆಡುತ್ತದೆ. ಹೀಗಾಗಿಯೇ ಹಲವರು ಈ ನಾಯಿಯನ್ನು ಸಾಕಲು ಇಷ್ಟಾ ಪಡ್ತಾರೆ. ಇದು ಮೂವತ್ತೆರಡು ಪೌಂಡ್ ತೂಕ ಹೊಂದಿದ್ದು, 12 ಪೌಂಡ್ ತೂಕದ ಟಶ್ಚನ್ ಡಾಗ್ ಕೂಡ ಇರುತ್ತದೆ.
ಬ್ರುಸೆಲ್ಸ್ ಗ್ರಿಫನ್: ಗಡ್ಡ ಹೊಂದಿರುವ ರೀತಿ ಕಾಣುವ ಈ ನಾಯಿ ನೋಡೋಕ್ಕೂ ಸಖತ್ ಕ್ಯೂಟ್ ಆಗಿರತ್ತೆ. ಇದರ ಕಣ್ಣು ಕೊಂಚ ಮನುಷ್ಯರ ಕಣ್ಣಿನಂತೆ ಕಾಣತ್ತೆ. ಇದನ್ನು ಸಾಕಿದವರು ಹೇಳುವ ಪ್ರಕಾರ, ಇದು ತನ್ನನ್ನು ಸಾಕಿದವರೊಟ್ಟಿಗೆ ಫ್ರೆಂಡ್ಲಿಯಾಗಿ ಇರೋದಲ್ದೆ, ಅವರನ್ನ ಖುಷಿ ಖುಷಿಯಾಗಿರೋ ಥರಾ ನೋಡಿಕೊಳ್ಳುತ್ತವೆಯಂತೆ.