Monday, December 23, 2024

Latest Posts

ಸ್ಮಾರ್ಟ್ ಮಾರುಕಟ್ಟೆಯಲ್ಲಿ ಶವೋಮಿ ಹೊಸ ಅಲೆ…! ಟಿ.ವಿ ಮಾರುಕಟ್ಟೆಯಲ್ಲಿ ಇನ್ನು ಶವೋಮಿ ಹವಾ..!

- Advertisement -

Technology News:

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಮೂರು ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಅಲೆಯನ್ನು ಹುಟ್ಟಿಸಿರುವ ಶಿಯೋಮಿ, ಮತ್ತೇ ಮಾರು ಸ್ಮಾರ್ಟ್‌ ಟಿವಿಗಳನ್ನು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಸ್ಯಾಮ್‌ಸಂಗ್ ಮತ್ತು ಎಲ್ ಜಿ ಟಿವಿಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಕಾಣಿಸಿಕೊಂಡಿವೆ ಎನ್ನಲಾಗಿದೆ. ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಟಿವಿಗಳು ಕಾಣಿಸಿಕೊಳ್ಳಲಿದೆ.

ಈಗ Mi TV 4C, Mi TV 4X ಮತ್ತು Mi TV 4S ಲಾಂಚ್ ಆಗಿದ್ದು, ಇವುಗಳಲ್ಲಿ 32 ಇಂಚಿನ ಮತ್ತು 55 ಇಂಚಿನ ಟಿವಿಗಳನ್ನು ಕಾಣಬಹುದಾಗಿದ್ದು, ಬೆಲೆಗಳು ಸಹ ತೀರಾ ಕಡಿಮೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ರೂ.10000ದ ಅಸುಪಾಸಿನಲ್ಲಿ ಟಿವಿಯನ್ನು ಶಿಯೋಮಿ ಮಾರಾಟ ಮಾಡಲು ಮುಂದಾಗಿದ್ದು, ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸುವ ಪ್ರಯತ್ನದಲ್ಲಿದೆ ಶವೋಮಿ.

Mi TV 4C ಸ್ಮಾರ್ಟ್ ಟಿವಿ:

ರೂ.10,600ಕ್ಕೆ ಮಾರಾಟವಾಗುವ ಈ ಟಿವಿಯೂ 32 ಇಂಚಿನದಾಗಿದ್ದು, HD ಗುಣಮಟ್ಟವನ್ನು ಹೊಂದಿದೆ. ಸ್ಮಾರ್ಟ್ ವಿಟಿಯಾಗಿದರುವ ಈ ಸ್ಮಾರ್ಟ್ ಟಿವಿಯಲ್ಲಿ 4GB ಇಂಟರ್ನಲ್ ಮೆಮೊರಿ ಮತ್ತು 1GB RAM ಅನ್ನು ಕಾಣಬಹುದಾಗಿದ್ದು, ಮಲ್ಟಿ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಬಳಕೆದಾರರಿಗೆ ಹೊಸ ಸೇವೆಯನ್ನು ನೀಡಲಿದೆ.

Mi TV 4S 55 ಇಂಚಿನ ಸ್ಮಾರ್ಟ್ ಟಿವಿ:

Mi TV 4S 55 ಇಂಚಿನ ಸ್ಮಾರ್ಟ್ ಟಿವಿ ರೂ.35,100ಕ್ಕೆ ದೊರೆಯಲಿದೆ. ಇದರಲ್ಲಿ 2GB RAM ಮತ್ತು 32GB ಇಂಟರ್ನ್ ಮೆಮೊರಿಯೊಂದಿಗೆ ಲಭ್ಯವಿದೆ. 4K UHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್‌ ಟಿವಿ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ.

Mi TV 4S 43 ಇಂಚಿನ ಸ್ಮಾರ್ಟ್ ಟಿವಿ:

Mi TV 4S ಸ್ಮಾರ್ಟ್ ಟಿವಿ ಎರಡು ಆವೃತ್ತಿಯಲ್ಲಿ ಮಾರಾಟವಾಗಲಿದ್ದು, 43 ಇಂಚಿನ ಮತ್ತು 55 ಇಂಚಿನ ಆವೃತ್ತಿಯೂ ದೊರೆಯಲಿದೆ. 43 ಇಂಚಿನ Mi TV 4S ಸ್ಮಾರ್ಟ್ ಟಿವಿ ರೂ.19,100ಕ್ಕೆ ದೊರೆಯಲಿದ್ದು, 4K UHD ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 8 GB ಇಂಟರ್ನಲ್ ಮೆಮೊರಿ ಮತ್ತು 1 GB RAM ಅನ್ನು ಕಾಣಬಹುದಾಗಿದೆ.

Mi TV 4X ಸ್ಮಾರ್ಟ್ ಟಿವಿ:

55 ಇಂಚಿನ Mi TV 4X ಸ್ಮಾರ್ಟ್‌ ಟಿವಿಯಲ್ಲಿ ರೂ.29,800ಕ್ಕೆ ಮಾರಾಟವಾಗಲಿದ್ದು, 4K HDR ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, 2GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್ ಮತ್ತು LGಗೆ ಸೆಡ್ಡು: ಈ ಸ್ಮಾರ್ಟ್ ಟಿವಿಯೂ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮತ್ತು LGಗೆ ಸೆಡ್ಡು ಹೊಡೆಯುವಂತೆ ನಿರ್ಮಿಸಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಬಳಕೆದಾರನ್ನು ಸೆಳೆಯಲು ಈ ಟಿವಿಯನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

- Advertisement -

Latest Posts

Don't Miss