10 ಮೊಟ್ಟೆಗಳನ್ನ ಬಾಯಿಂದ ಹೊರಹಾಕಿದ ನಾಗರಹಾವು…!

www.karnatakatv.net: ಮಹಾರಾಷ್ಟ್ರ- ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ನಾಗರ ಹಾವು ನುಂಗಿದೆ. ಇಂತಹ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದ ಕೊಸಾಂಬಿ ಗ್ರಾಮದಲ್ಲಿ ನಡೆದಿದೆ. 6 ಅಡಿ ಉದ್ದದ ಹಾವು ಮೊಟ್ಟೆಗಳನ್ನ ಬಾಯಿಯಿಂದ ಹೊರಹಾಕುತ್ತಿರುವ ದೃಶ್ಯವನ್ನ ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ಕೊಸಾಂಬಿ ಗ್ರಾಮದ ಪವನ್ ಎಂಬುವರು ಕೋಳಿ ಸಾಕಾಣಿಕೆ ಮಾಡ್ತಾರೆ. ಸಾಕಾಣಿಕೆ ಕೇಂದ್ರಕ್ಕೆ ಸದ್ದಿಲ್ಲದೆ ಬಂದ ಹಾವು ಮೊಟ್ಟೆಗಳನ್ನೆಲ್ಲಾ ನುಂಗಿದೆ. ಬಳಿಕ ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿತ್ತು. ಇದನ್ನ ಕಂಡ ಸ್ಥಳೀಯರು ಕೂಡಲೇ ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ಹಾವಾಡಿಗ ತಕ್ಷಣ ಬಂದು ಹಾವನ್ನ ಹಿಡಿದಿದ್ದಾನೆ. ಬಳಿಕ ಒಂದಾದ ಮೇಲೊಂದು ಮೊಟ್ಟೆಗಳು ಹಾವಿನ ಬಾಯಿಂದ ಹೊರಬಿದ್ದಿದೆ. ಕೋಳಿ ಮೊಟ್ಟೆಗಳನ್ನು ಹೊರಹಾಕುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

About The Author