Wednesday, July 2, 2025

Latest Posts

ನೈಸರ್ಗಿಕ ಸೌಂದರ್ಯ ಅನುಭವಿಸುತ್ತಿರುವ ಉರಗ:ಹಳ್ಳದಲ್ಲಿ ಸರಸ ಸಲ್ಲಾಪ…!

- Advertisement -

www.karnatakatv.net:- ರಾಜ್ಯ:ಹುಬ್ಬಳ್ಳಿ: ಮಳೆಗಾಲ ಪ್ರಾರಂಭವಾಗಿ ಕೆರೆ, ಹಳ್ಳ,ಕೊಳ ತುಂಬಿ ಹರಿಯಿತ್ತಿದ್ದರೆ ಪ್ರಾಣಿ ಸಂಕುಲಕ್ಕೆ ಎಲ್ಲಿಲ್ಲದ ಸಂತೋಷ. ಮನುಷ್ಯನಿಗಿಂತ ಕಾಡಿನ ಪ್ರಾಣಿ -ಪಕ್ಷಿಗಳಿಗೆ ಸ್ವರ್ಗವೇ ಧರೆಗೆ ಇಳಿದಂತೆ ಭಾಸವಾಗುತ್ತೆ. ಅಂತಹುದೇ ಒಂದು ಘಟನೆ ಅಲ್ಲಾಪೂರ ಗ್ರಾಮದ ಹಳ್ಳದಲ್ಲಿ ನಡೆದಿದೆ. ಹೌದು.. ಮಳೆಗೆ ಅಲ್ಲಾಪುರ ಗ್ರಾಮದ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಎರಡು ಹಾವುಗಳು ಸರಸ ಸಲ್ಲಾಪ ನಡೆಸುತ್ತಿವೆ. ನಿಸರ್ಗ ಸೌಂದರ್ಯ ಮತ್ತಷ್ಟು ಶ್ರೀಮಂತಗೊಂಡು ನೋಡುಗರ ಕಣ್ಮನ ಸೆಳೆಯುವಂತಿದೆ. ಇಂತಹ ಪ್ರಕೃತಿಯ ಮಡಿಲಲ್ಲಿ ಹಾವುಗಳು ನೀರಿನಲ್ಲಿ ಈಜಾಡುವ ಮೂಲಕ ಸರಸ ಸಲ್ಲಾಪ ನಡೆಸುತ್ತಿರುವ ದೃಶ್ಯವೊಂದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು, ಮನುಷ್ಯ ಕೋವಿಡ್ ವೈರಸ್ ನಿಂದ ಜೀವನ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ. ಈ ಜೀವಿಗಳು ಮಾತ್ರ ಯಾವುದೇ ಚಿಂತೆಯಿಲ್ಲದೇ ನಿಸರ್ಗ ಸೌಂದರ್ಯ ಸವಿಯುವ ಮೂಲಕ ಸರಸ ಸಲ್ಲಾಪದಲ್ಲಿ ತೊಡಗಿರುವುದು ನಿಜಕ್ಕೂ ವಿಶೇಷವಾಗಿದೆ.

- Advertisement -

Latest Posts

Don't Miss