Social media: ಅಪ್ರಾಪ್ತರ ಅಶ್ಲೀಲ ವೀಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಸ್ಥಳಿಯರಿಂದ ಬಂಧನ..!

ಹುಬ್ಬಳ್ಳಿ; ಅಪ್ರಾಪ್ತ ವಯಸ್ಕರನ್ನು ಟಾರ್ಗೆಟ್ ಮಾಡಿ ಅವರ ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡಿ ಹರಿಬಿಡುತ್ತಿದ್ದ ವ್ಯಕ್ತಿಯೋರ್ವನನ್ನು ಸ್ಥಳೀಯರೇ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ನಗರದಲ್ಲಿ ಮೂಲತಃ ಉತ್ತರ ಪ್ರದೇಶದ ವ್ಯಕ್ತಿಯೇ ಇಂತಹ ಕೃತ್ಯಕ್ಕೆ ಮುಂದಾಗಿದ್ದ ಎಂದು ತಿಳಿದು ಬಂದಿದೆ. ಅಪ್ರಾಪ್ತ ವಯಸ್ಕರನ್ನು ಬಳಸಿಕೊಂಡು ಅವರ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ಹಣಕ್ಕಾಗಿ ವಿಡಿಯೋ ಹಂಚುತ್ತಿದ್ದ ವಿಕೃತ ವ್ಯಕ್ತಿಯು ಹಳೇ ಹುಬ್ಬಳ್ಳಿ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ವಾಸ ಮಾಡುತ್ತಿದ್ದನ್ನೆಲಾಗಿದ್ದು, ಆತನನ್ನು ಗಮನಿಸಿದ್ದ ಸ್ಥಳೀಯರು ಮನಬಂದಂತೆ ತಳಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆ ವ್ಯಕ್ತಿ ಯಾರು? ಏನು?  ಸೇರಿದಂತೆ ಮೊದಲಾದ ಮಾಹಿತಿಯು ತನಿಖೆ ಬಳಿಕವೇ ಗೊತ್ತಾಗಲಿದೆ. ಈ ಕುರಿತಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ‌ ಕೃತ್ಯಕ್ಕೆ ಸಂಬಂಧಿಸಿದಂತೆ ‌ಪೊಲೀಸರು  ತೀವ್ರ ತನಿಖೆ ನಡೆಸಿದ್ದಾರೆ.

ಆಕ್ಷೇಪಾರ್ಹ ಪದ ಬಳಕೆ ಆರೋಪ: ಕ್ಷಮೆ ಕೇಳಿದ ಶಾಸಕ ಎಸ್ ಕೆ ಸುರೇಶ್..!

Tiger: ದನ ಮೇಯಿಸಲು ಹೋದ ರೈತ ಹುಲಿಗೆ ಆಹಾರವಾದ..!

ಬಿಜೆಪಿ ಬ್ಯಾನ್ ಮಾಡಿದ ಸಂಘಟನೆಗಳು ಬೇರೆ ಮುಖವಾಡ ಹಾಕಿಕೊಂಡು ಬಂದಿವೆ; ಟೆಂಗಿನಕಾಯಿ..!

About The Author