ಕ್ಯಾಲ್ಸಿಯಂ ಕೊರತೆಗೆ ಪರಿಹಾರಗಳು..!

ಇತ್ತೀಚಿನ ದಿನಗಳಲ್ಲಿ ಬಹಳ ಜನರಿಗೆ ಕ್ಯಾಲ್ಸಿಯಂ ಕೊರತೆ ಹೆಚ್ಚಾಗುತ್ತಿದೆ . ಹಾಗಾದರೆ ಈ ಸಮಸ್ಯೆಗಳಿಗೆ ಕಾರಣಗಳೇನು..? ಈ ಸಮಸ್ಯೆಯ ಲಕ್ಷಣಗಳೇನು, ಇದಕ್ಕೆ ಶಾಶ್ವತ ಪರಿಹಾರವೇನು..? ಎಂದು ತಿಳಿದುಕೊಳ್ಳೋಣ .

ಕ್ಯಾಲ್ಸಿಯಂ ಕೊರತೆ ಬರುವುದಕ್ಕೆ ಮುಖ್ಯವಾಗಿ ಕಾರಣವೇನೆಂದರೆ , ನಮ್ಮ ಆಹಾರದಲ್ಲಿರುವ ಕ್ಯಾಲ್ಸಿಯಂ ಅಂಶವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವ ವ್ಯವಸ್ಥೆ ಶರೀರದಲ್ಲಿ ಇಲ್ಲದಿರುವುದು , ಅಥವಾ ಶರೀರಕ್ಕೆ ಸೇರಿರುವಂಥಹ ಆಹಾರವನ್ನು ಕ್ಯಾಲ್ಸಿಯಂ ಆಗಿ ಪರಿವರ್ಥನೆ ಮಾಡುವ ಶಕ್ತಿ ನಮ್ಮ ಜೀರ್ಣಾಂಗ ವ್ಯಸ್ಥೆಯಲ್ಲಿ ಇರುವುದಿಲ್ಲ ,ಶರೀರಕ್ಕೆ ಯಾವುದೇ ಕೊರತೆ ಬಂದಿದೆ ಎಂದರೆ ಅದಕ್ಕೆ ಮುಖ್ಯಕಾರಣ ನಮ್ಮ ಜೀರ್ಣಾಂಗ ವ್ಯಸ್ಥೆಯಲ್ಲಿ ಆಗಿರುವಂತಹ ತೊಂದರೆಗಳು . ಯಾವಾಗ ಜೀರ್ಣಾಂಗ ವ್ಯವಸ್ಥೆ ಕ್ರಿಯಾಶೀಲವಾಗುತ್ತದೆ ಹಾಗೂ ಸ್ಟ್ರಾಂಗ್ ಹಾಗಿರುತ್ತದೋ , ಕ್ರಿಯಾಶೀಲವಾಗಿ ಬಲಿಷ್ಠವಾಗುತ್ತದೆ ಹಾಗ ನಮ್ಮ ಶರೀರಕ್ಕೆ ಬೇಕಾಗಿರುವ ಎಲ್ಲಾ ಪೋಷಕ ತತ್ವಗಳು ಸಮರ್ಪಕವಾಗಿ ದೊರೆಯುತ್ತದೆ .

ಉದಾಹರಣೆಗೆ ಬಡತನದಲ್ಲಿ ಬದುಕುವ ಜನರಿಗೆ ಕ್ಯಾಲ್ಸಿಯಂ ಕೊರತೆ, ವಿಟಮಿನ್ ಕೊರತೆ ,ಪ್ರೊಟೀನ್ ಕೊರತೆ ,ಐರನ್ ಕೊರತೆಗಳು ಉಂಟಾಗುವುದಿಲ್ಲ . ಹಾಗೆಯೆ ಶ್ರೇಮಂತರ ಮನೆಯಲ್ಲಿ ಪ್ರತಿದಿನ ಹಾಲು , ಡ್ರೈ ಫ್ರೂಟ್ , ತಿನ್ನುತ್ತಿರುತ್ತಾರೆ ಕ್ಯಾಲ್ಸಿಯಂ ರಿಚ್ ಇರುವ ಆಹಾರವನ್ನು ಸೇವನೆ ಮಾಡುತ್ತಿರುತ್ತಾರೆ , ಆದರೂ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ , ಯಾಕೆ ಎಂದು ಯೋಚಿಸಿದರೆ ಇದಕ್ಕೆ ನಮ್ಮ ಸಿಸ್ಟಮ್ ಎನ್ನಬಹುದು ಇದನ್ನು ಚೇಂಜ್ ಮಾಡಬೇಕು ಅಂದರೆ ನಮ್ಮ ಅವ್ಯಾಸಗಳನ್ನು ಬದಲಿಸಬೇಕು , ಬದಲಾಗಿ ಅದಕ್ಕೆ ಔಷಧಿಯನ್ನು ಕೊಡಬಾರದು . ಜೀರ್ಣಾಂಗ ವ್ಯವಸ್ಥೆ ಕ್ರಿಯಾಶೀಲವಾಯಿತು ಎಂದರೆ , ಅದು ಕ್ಯಾಲ್ಸಿಯಂ ಆಗಿ, ಪ್ರೊಟೀನ್ಆಗಿ , ಕನ್ವರ್ಟ್ ಆಗುತ್ತದೆ . ನಾವೂ ಏನೇ ತಿಂದರು ಅದನ್ನು ಪರಿವರ್ಥನೆ ಮಾಡುವಂತಹ ಶಕ್ತಿ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಇದೆ . ಅಂತಹ ಈ ಜೀರ್ಣಾಂಗ ವ್ಯವಸ್ಥೆ ಈ ದಿನಗಳಲ್ಲಿ , ಸಂಪೂರ್ಣವಾಗಿ ಹದಗೆಟ್ಟಿದೆ ಏಕೆಂದರೆ , ತಡವಾಗಿ ಆಹಾರ ಸೇವನೆ ಮಾಡುವುದು, ಅಶುದ್ಧ ಆಹಾರವನ್ನು ಸೇವನೆ ಮಾಡುವುದು, ಅಶುದ್ದ ಆಹಾರವೆಂದರೆ , ಫ್ರೈಡ್ ಫುಡ್ , ಜಂಕ್ ಫುಡ್ ,ರಿಫೈನ್ಡ್ ಫುಡ್ ಗಳು ಇವುಗಳಿಂದ ನಮ್ಮ ಆರೋಗ್ಯ ಕೆಡುತ್ತಿದೆ .

ಹಗೇಯೇ ಮನುಷ್ಯನು ಪ್ರಕೃತಿಯನು ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಿಲ್ಲ, ದುರುಪಯೋಗ ಪಡೆಸಿ ಕೊಳ್ಳುತ್ತಿದ್ದಾನೆ , ಪ್ರಕೃತ್ತಿಯಿಂದ ದೂರ ಬಂದು ಬದುಕುತ್ತಿದ್ದಾನೆ ಅಂದರೆ , ಸ್ವಚ್ಛವಾದ ತಂಪಾದ ಗಾಳಿಯನ್ನು ಬಿಟ್ಟು ಎಸಿ ಬಳಸುವುದು ,ಕಾರಿನಲ್ಲಿ ಎಸಿ ಬಳಸುವುದು ,ಬಿಸಿಲಿಗೆ ಮೈ ಒಡ್ಡದೆ ಇರುವುದು , ಕ್ಯಾಲ್ಸಿಯಂ ಕೊರತೆ ಸೂರ್ಯನಿಗೆ ಮೈ ಒಡ್ಡದೆ ಇರುವುದು ಮುಖ್ಯ ಕಾರಣವಾಗಿದೆ.ಈ ರೀತಿ ಎಲ್ಲ ಕೃತಕವಾದ ವಾತಾವರಣದಲ್ಲಿ ಬೆಳೆಯುವುದರಿಂದ ಮನುಷ್ಯನಿಗೆ ಕ್ಯಾಲ್ಸಿಯಂ ಕೊರತೆ, ಉಂಟಾಗುತ್ತದೆ .

ಹಾಗಾದರೆ ಇವುಗಳಿಗೆ ಪರಿಹಾರಗಳೇನು ಎಂದು ತಿಳಿದುಕೊಳ್ಳೋಣ ,ಮೊದಲನೇಯದಾಗಿ , ಹೊಟ್ಟೆ ಶುದ್ದೀಕರಣ, ಕರಳು ಶುದ್ದೀಕರಣ , ಜೀರ್ಣಾಂಗ ವ್ಯವಸ್ಥೆಯನ್ನು ಕ್ರಿಯಾಶೀಲ ಪಡೆಸಿಕೊಳ್ಳುವುದು . ಜೀರ್ಣಾಂಗ ವ್ಯವಸ್ಥೆ ಕ್ರಿಯಾಶೀಲ ವಾಗಬೇಕಾದರೆ ಭೋಜನದ ಮುಂಚೆ ಹಸಿ ಶುಂಠಿಯನ್ನು ನಾವು ಬಾಯಲ್ಲಿ ಅಗಿದು ಅಗಿದು ಅದನ್ನು ಸೇವನೆ ಮಾಡಬೇಕು ಹೀಗೆ ಮಾಡಿದರೆ ಜೀರ್ಣಾಂಗ ವ್ಯವಸ್ಥೆ, ಕ್ರಿಯಾಶೀಲವಾಗುತ್ತದೆ .

ಹೊಟ್ಟೆ ಶುದ್ದಿಗೆ ಮತ್ತು ಕ್ಯಾಲ್ಸಿಯಂಅನ್ನು ವೃದ್ಧಿ ಗೊಳಿಸುವುದಕ್ಕಾಗಿ ನಾವು ಬೆಳಿಗ್ಗೆ ಎದ್ದು ಬೂದುಕುಂಬಳಕಾಯಿ ಜ್ಯೂಸು ಅನ್ನು ಕುಡಿಯಬೇಕು , ಇನ್ನು ಮದ್ಯಾಹ್ನದ ವೇಳೆ ಒಂದು ಗ್ಲಾಸ್ ಬೆಟ್ಟದ ನೆಲ್ಲಿಕಾಯಿಯ ಜ್ಯೂಸು ಅನ್ನು ಕುಡಿಯಬೇಕು , ಇನ್ನು ಮಲಗುವ ಸಮಯದಲ್ಲಿ ಕಿಡ್ನಿ ಸಮಸ್ಯೆ ಇಲ್ಲದೆ ಇರುವವರು , ಒಂದುಗ್ರಾಮ್ ಸುಣ್ಣವನ್ನು ವೀಳ್ಯದೆಲೆ ಜೊತೆಗೆ ಛೆನ್ನಾಗಿ ಅಗಿದು ತಿನ್ನಬೇಕು ಇದರಿಂದ ಕ್ಯಾಲ್ಸಿಯಂ ಕೊರತೆ ಉಂಟಾಗುವುದಿಲ್ಲ. ಹಾಗೂ ಎಲ್ಲ ರೀತಿಯ ಸೊಪ್ಪುಗಳನ್ನು ,ತರಕಾರಿಗಳನ್ನು ಸೇವಿಸಬೇಕು ಮುಖ್ಯವಾಗಿ ಮೊಳಕೆ ಕಾಳುಗಳನ್ನು ಸೇವಿಸಬೇಕು . ಇದರ ಜೊತೆಗೆ ನೆನೆಸಿದ ಬಾದಾಮಿಯನ್ನು ಹಾಗೂ ಸೀಜನ್ ಹಣ್ಣುಗಳನ್ನು ಸೇವಿಸಬೇಕು .

ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕ್ಯಾಲ್ಸಿಯಂ ನಿಮಗೆ ಸಿಗುತ್ತದೆ, ಆದರೆ ಆದರ ಜೊತೆಗೆ ನಿಮಗೆ ಹಾರ್ಟ್ ಅಟ್ಯಾಕ್ ಹಾಗುವ ಸಾಧ್ಯತೆ ಇದೆ ಮತ್ತು ಬ್ರೈನ್ ಇಮ್ರೋಜ್ ಆಗುವ ಸದ್ಯೆತೆ ಇದೆ , ಇದು ಬ್ಲಡ್ ನಲ್ಲಿ ಟಾಕ್ಸಿಸಿಟಿ ಯನ್ನು ಹೆಚ್ಚು ಮಾಡುತ್ತದೆ , ಆದಕಾರಣ ಮಾತ್ರೆಗಳನ್ನು ಸೇವಿಸುವ ಬದಲು, ಅಪಾಯ ರಹಿತವಾಗಿರುವಂಥಹ , ಕ್ರಮಬದ್ದ ವಾಗಿರುವಂಥಹ ಜೀವನ ಶೈಲಿಯಿಂದ ಕ್ಯಾಲ್ಸಿಯಂ ಕೊರತೆಯನ್ನು ನಿವಾರಣೆ ಮಾಡಬಹುದಾದ. ಸಿಸ್ಟಮ್ ಅನ್ನು ಅನುಸರಿಸಿ .

ಶ್ವಾಸಕೋಶದ ಕಾರ್ಯವನ್ನು ಸುಧಾರಿಸಲು ನಿಮಗೆ ಸಹಾಯ ಮಾಡುವ 4 ವಿಧದ ಹಣ್ಣಿನ ರಸಗಳು..!

ಹೃದಯ ನೋವು ಯಾವ ಸಮಯದಲ್ಲಿ ಸಂಭವಿಸುತ್ತದೆ..? ಅಧ್ಯಯನದಲ್ಲಿ ಆಘಾತಕಾರಿ ವಿಷಯಗಳು..!

ಕಪ್ಪು ಅಕ್ಕಿಯ ಬಗ್ಗೆ ನಿಮಗೆ ತಿಳಿದಿದೆಯೇ..? ಇದನ್ನು ತಿನ್ನುವುದರಿಂದ 4 ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ..!

 

About The Author