Monday, July 22, 2024

Latest Posts

ಹುಬ್ಬಳ್ಳಿಯಲ್ಲಿ ಮತ್ತೊಂದು ಹ*ತ್ಯೆ: ಚಾಕುವಿನಿಂದ ಇರಿದು ಆಟೋ ಚಾಲಕರ ಸಂಘದ ಅಧ್ಯಕ್ಷ ಪುತ್ರನ ಕೊ*ಲೆ

- Advertisement -

Hubli News: ಹುಬ್ಬಳ್ಳಿ ನಗರದ ಪವನ್ ಶಾಲೆಯ ಹಿಂಭಾಗದಲ್ಲಿ ಹಳೇ ದ್ವೇಷದ ಹಿನ್ನೆಲೆ ಮದ್ಯ ಕುಡಿಸಿ ಚಾಕುವಿನಿಂದ ಇರಿದು ಓರ್ವ ಯುವಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಆಟೋ ಚಾಲಕರ ಸಂಘದ ಅಧ್ಯಕ್ಷನ ಪುತ್ರ ಆಕಾಶ್ ಮಠಪತಿ ಮೃತ ಯುವಕ.

ಚಾಕುವಿನಿಂದ ಇರಿದು ಆಟೋ ಚಾಲಕರ ಸಂಘದ ಅಧ್ಯಕ್ಷನ ಪುತ್ರನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಲೋಹಿಯಾ ನಗರದ ಪವನ್ ಶಾಲೆಯ ಹಿಂಭಾಗದಲ್ಲಿ ನಡೆದಿದೆ. ಆಕಾಶ್ ಮಠಪತಿ (25) ಮೃತ ಯುವಕ. ಆಕಾಶ್ ಮಠಪತಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಹಳೇ ದ್ವೇಷದ ಹಿನ್ನೆಲೆ ಮದ್ಯ ಕುಡಿಸಿ ದುಷ್ಕರ್ಮಿಗಳಿಂದ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆಕಾಶ್ ಮಠಪತಿ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಶವಾಗಾರದ ಮುಂದೆ ಆಕಾಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ನೇಹಿತರ ಮೇಲೆ ಅನುಮಾನ ವ್ಯಕ್ತಪಡಿಸಿದ ತಂದೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ರೇಣುಕಾ ಸುಕುಮಾರ ಪ್ರತಿಕ್ರಿಯಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ತಲೆಗೆ ಗಾಯ ಆಗಿರುವುದು ತಿಳಿದು ಬಂದಿದೆ. ಆಕಾಶ್ ತಲೆ ಬಿಟ್ಟು ಬೇರೆ ಕಡೆ ಗಾಯ ಇಲ್ಲ. ತಂದೆ ಶೇಖರಯ್ಯ ಮಠಪತಿ ಅವನ ಸ್ನೇಹಿತರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಆರು ಜನ ಸ್ನೇಹಿತರ ಮೇಲೆ ಆರೋಪ ಮಾಡಿದ್ದಾರೆ. ನಾವು ಅವರು ಎಲ್ಲ ಮಾಹಿತಿ ಕಲೆ ಹಾಕಿದ್ದೇವೆ. ಅವರ ತಂದೆ ಯಾರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಅವರನ್ನು ಕರೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪೊಲೀಸ್ ಕಮೀಷನರ್ ಒತ್ತಡಕ್ಕೆ ಅಧಿಕಾರಿಗಳು ಬಾಗುತ್ತಿದ್ದಾರೆ – ನಿರಂಜನಯ್ಯ ಹಿರೇಮಠ ಆರೋಪ

ಕುಡಿದ ಅಮಲಿನಲ್ಲಿ ಜೀವಗಳ ಜೊತೆ ಚೆಲ್ಲಾಟ – ತಪ್ಪಿತು ಭಾರೀ ಅನಾಹುತ

- Advertisement -

Latest Posts

Don't Miss