Sunday, September 8, 2024

Latest Posts

ನಟಿ ಸೊನಾಲಿ ಸಾವಿಗೆ ಮಹತ್ತರ ಟ್ವಿಸ್ಟ್: ಸಹಜ ಸಾವಲ್ಲ ಕೊಲೆ…!

- Advertisement -

Crime News:

ನಟಿ ಹಾಗೂ ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಅವರ ಅನುಮಾನಾಸ್ಪದ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದೇ ಕೊಲೆ ವಿಚಾರ ಬಯಲಿಗೆ ಬರಲು ಕಾರಣವಾಯಿತು. ಹೃದಯಾಘಾತದ ಸಾವು ಎಂದು ಭಾವಿಸಿದ್ದ ಪೊಲೀಸರು, ತನಿಖೆ ಮುಂದುವರಿದಂತೆ ಹೊರಬರುತ್ತಿರುವ ಒಂದೊಂದೇ ಸಂಗತಿಗಳನ್ನು ಕಂಡು ಸ್ವತಃ ಅಚ್ಚರಿಗೆ ಒಳಗಾಗುತ್ತಿದ್ದಾರೆ. ಸೊನಾಲಿ ಅವರಿಗೆ ಮಾದಕ ವಸ್ತುವನ್ನು ನೀಡಲಾಗಿತ್ತು ಎಂಬುದು ಶುಕ್ರವಾರ ಗೊತ್ತಾಗಿದೆ. ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೇಹದ ಮೇಲೆ ಬಲವಾದ ಹೊಡೆತ ಬಿದ್ದ ಗಾಯಗಳಾಗಿರುವುದು ತಿಳಿದು ಬಂದಿತ್ತು.

ಗೋವಾದ ರೆಸ್ಟೋರೆಂಟ್- ನೈಟ್‌ ಕ್ಲಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಸೊನಾಲಿ ಪೋಗಟ್ ಅವರ ಇಬ್ಬರು ಸಹವರ್ತಿಗಳು ಅವರಿಗೆ ಹಾನಿಕಾರಕ ಪದಾರ್ಥವನ್ನು ನೀರಿನಲ್ಲಿ ಬೆರೆಸಿ ಬಲವಂತವಾಗಿ ಕುಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೊನಾಲಿ ಅವರ ಸಾವು ಕೊಲೆ ಪ್ರಕರಣ ಎಂದು ಎಫ್‌ಐಆರ್ ದಾಖಲಿಸಿಕೊಂಡ ಬಳಿಕ, ಅವರು ಓಡಾಡಿದ್ದ ಮತ್ತು ತಂಗಿದ್ದ ಸ್ಥಳಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನೈಟ್ ಕ್ಲಬ್‌ನಲ್ಲಿ ದೊರೆತ ಭದ್ರತಾ ಕ್ಯಾಮೆರಾದ ದೃಶ್ಯಗಳಲ್ಲಿ ಅವರಿಗೆ ಡ್ರಗ್ಸ್ ನೀಡುವುದು ಕಂಡುಬಂದಿದೆ. ಬಂಧನದಲ್ಲಿರುವ ಆರೋಪಿಗಳು ಕೂಡ ಅದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ನೇಹಿತೆಯಿಂದಲೇ ಕೊಲೆಯಾದ ಚಂದ್ರಕಲಾ…! 1 ವರ್ಷದ ಬಳಿಕ ರಹಸ್ಯ ಬಯಲು..!

ಅಮೇರಿಕಾದಲ್ಲಿ ಮೆಕ್ಸಿಕಾನ್ ಮಹಿಳೆಯಿಂದ ಭಾರತೀಯರಿಗೆ ಜನಾಂಗೀಯ ನಿಂದನೆ..!

ಡೆಲಿವರಿ ಬಾಯ್ ಗುಂಡು ಹಾರಿಸಿದ ಸಹೋದರರು…! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ…!

- Advertisement -

Latest Posts

Don't Miss