Saturday, November 23, 2024

Latest Posts

ಎಸ್ಇಪಿ ಎಂದರೆ ಸೋನಿಯಾ ಗಾಂಧಿ ಎಜಿಕೇಶನ್ ಪಾಲಿಸಿ ಏನು.? ಕಾಂಗ್ರೆಸ್ ಗೆ ಕಾಗೇರಿ ಪ್ರಶ್ನೆ.!

- Advertisement -

ಹುಬ್ಬಳ್ಳಿ: ಈ ಸರ್ಕಾರ ಮೊದಲನೆಯ ಕ್ಯಾಬಿನೆಟ್‌ನಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದೆ‌. ಎನ್ಇಪಿ ರದ್ದು ಮಾಡಿ ಎಸ್‌ಇಪಿ ಮಾದರಿ ಮಾಡಲು ಹೊರಟಿದೆ. ಹೇಳವವರು ಕೇಳುವವರು ಇಲ್ಲದೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದೆ. ಎಸ್‌ಇಪಿ ಯಾವ ಕಾರಣಕ್ಕಾಗಿ ಜಾರಿಗೆ ತರುತ್ತಿದ್ದಾರೆಂದು ಹೇಳಲಿ. ಎಸ್‌ಇಪಿ ಅಂದ್ರೆ ಸೋನಿಯಾ ಗಾಂಧಿ ಎಜುಕೇಶನ್ ಪಾಲಿಸಿ ಏನೂ ಎಂದು ವ್ಯಂಗ್ಯ ಮಾಡಿದರು.

ಎಸ್‌ಇಪಿಯನ್ನ ಈ ಸರ್ಕಾರದ ಮಂತ್ರಿಮಂಡಲದಲ್ಲಿರುವ ಸಚಿವರು, ಕಾಂಗ್ರೆಸ್ ಶಾಸಕರು ಶಿಕ್ಷಣ ಸಂಸ್ಥೆಗಳಲ್ಲಿ ಮೊದಲು ಜಾರಿಗೆ ತರಲಿ. ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಎನ್‌ಇಪಿ, ಬಡ ಮಕ್ಕಳು ಓದುವ ಶಾಲೆಯಲ್ಲಿ ಎಸ್‌ಇಪಿ ಜಾರಿಗೆ ಏಕೆ..? ಇದರಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಗುಲಾಮಿತನವನ್ನ ಹೆಚ್ಚಿಸಲು, ತಾರತಮ್ಯ ಹೆಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದಕ್ಕಾಗಿ ನಾವು ಅಭಿಯಾನ ಮಡುತ್ತೆವೆ. ಪೀಪಲ್ಸ್ ಫೋರಂ ಫಾರ್ ಕರ್ನಾಟಕ ವತಿಯಿಂದ ಅಭಿಯಾನ ಮಾಡುತ್ತೆವೆ.

ಎನ್ಇಪಿ ರದ್ದು ಮಾಡಬಾರದು, ಎಸ್‌ಇಪಿ ಜಾರಿಯಾಗಬಾರದು. ಎಸ್‌ಇಪಿ ಜಾರಿ ಮಾಡಿದೆ ಆದಲ್ಲಿ ನಮ್ಮ‌ ಮಕ್ಕಳಿಗೆ ‌ಅನ್ಯಾಯ ಆಗುತ್ತದೆ. ಈ ಸರ್ಕಾರ ಪಠ್ಯಕ್ರಮದ ಬದಲಾವಣೆ ಮಾಡಿದೆ. ಚಕ್ರವರ್ತಿ ಸೂಲೆಬಲೆ, ಗಣೇಶ  ಹೆಗಡೆವಾರು ಬರೆದಿದ್ದ ಪಠ್ಯಕ್ರಮವನ್ನು ತೆಗೆದು ಹಾಕಿದ್ದು ಏಕೆ..? ಪಠ್ಯಕ್ರಮವನ್ನ ಬದಲಾವಣೆ ಮಾಡಿ, ರಾಜ್ಯದ ಜನರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ರಾಜ್ಯ ಸರ್ಕಾರದ ವಿರುದ್ದ ವಿಶ್ವೇಶ್ವರಯ್ಯಾ ಹೆಗಡೆ ಕಾಗೇರಿಯವರು ಆಕ್ರೋಶ ಹೊರಹಾಕಿದರು.

ಆಂಗ್ಲ ಭಾಷೆಯಲ್ಲಿ ಏಳು ಸಾವಿರ ವ್ಯಾಕರಣ ಬರೆದ ಗ್ರಾಮೀಣ ಪ್ರತಿಭೆ .!

ಭಕ್ತಿ ಸಂಗೀತಕ್ಕಿದೆ ಮನಸು ಜೋಡಿಸುವ ಶಕ್ತಿ

ವಾಣಿಜ್ಯನಗರಿಯಲ್ಲಿ 21ದಿನದ ಗಣಪತಿಗೆ ವಿದಾಯ: ಸಂಭ್ರಮಿಸಿದ ಯುವಕರು..!

- Advertisement -

Latest Posts

Don't Miss