ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೂನ್ ನಲ್ಲಷ್ಟೇ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಕೆ ಕಂಡಿದ್ದರು.ಆದರೆ ಇದೀಗ ಮತ್ತೆ ಕೋವಿಡ್ ಸೋಂಕು ಸೋನಿಯಾ ಗಾಂಧಿಗೆ ತಗುಲಿವೆ. ಶ್ವಾಸಕೋಶ ಅನ್ನನಾಳಕ್ಕೆ ಸೋಂಕು ತಗುಲಿದ್ದು. ಐಸೋಲೇಶನ್ ನಲ್ಲಿ ಇದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಸೋನಿಯಾ ಗಾಂಧಿ ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರು. ಈ ಮಧ್ಯೆ ಇಡಿ ತನಿಖೆಗೂ ಒಳಗಾಗಿದ್ದ ಸೋನಿಯಾಗೆ ಮತ್ತೆ ಇದೀಗ ಕೋವಿಡ್ ಸೋಂಕು ಧೃಡಪಟ್ಟಿದೆ.ಹಾಗೆಯೆ ಸೋನಿಯಾ ಗಾಂಧಿಗೆ ಸೋಂಕು ದೃಢಪಟ್ಟಿರುವ ವಿಚಾರವನ್ನು ಜೈರಾಮ್ ರಮೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.




